ಕಲಬೆರಕೆ ಹಾಲು ಸರಬರಾಜು ಶಂಕೆ – ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ದಾಳಿ

Public TV
1 Min Read

ಯಾದಗಿರಿ: ಕಲಬೆರಕೆ (Adulteration) ಹಾಲು ಸರಬರಾಜು ಶಂಕೆ ವ್ಯಕ್ತಪಡಿಸಿ ಹಾಲು ಮಾರಾಟ ಮಳಿಗೆ ಹಾಗೂ ಹಾಲು ಸರಬರಾಜು ವಾಹನಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ (Department of Food Safety) ಅಧಿಕಾರಿಗಳು ದಾಳಿ (Ride) ನಡೆಸಿರುವ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

ರಂಜಾನ್ (Ramzan) ಹಬ್ಬ ಹಿನ್ನೆಲೆ ಕಲಬೆರಕೆ ಹಾಲು (Milk) ಸರಬರಾಜು ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ಶನಿವಾರ ಬೆಳ್ಳಂಬೆಳಗ್ಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿದ್ದಾರೆ. ಯಾದಗಿರಿ ನಗರದ ರೈಲ್ವೆ ನಿಲ್ದಾಣದ ರಸ್ತೆ, ಚಿತ್ತಾಪುರ ರಸ್ತೆ ಸೇರಿದಂತೆ ಅನೇಕ ಕಡೆ ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ಆಂಜನೇಯ ಎಂಬವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ವಿವಿಧ ಬ್ರ್ಯಾಂಡ್‌ನ ಹಾಲಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಮುಗಿಯುವವರೆಗೂ ಲಿಂಗಾಯತ ದಾಳ ಬಳಸಿ: ಶಾ ತಾಕೀತು 

ಸಂಗ್ರಹಿಸಿದ ಹಾಲನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ (Laboratory) ಕಳುಹಿಸಲಿದ್ದು, ಕಲಬೆರಕೆ ಎಂದು ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ನಾಯಕರಿಗೆ ಕ್ಲಾಸ್‌ – ಬಂಡಾಯ ಶಮನಕ್ಕೆ ಶಾ ಮದ್ದು

Share This Article