ಸಿಂಪಲ್ಲಾಗಿ ಮನೆಯಲ್ಲೇ ಮಾಡಿ ಚಿಕನ್ ಪಾಪ್‌ಕಾರ್ನ್‌

Public TV
2 Min Read

ಇತ್ತೀಚಿನ ದಿನ ಜನರು ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ, 5 ಗಂಟೆ ಕೆಲಸವನ್ನ 5-10 ನಿಮಿಷಗಳಲ್ಲೇ ಮಾಡಿಮುಸಗಿಸಬೇಕು ಅಂದುಕೊಳ್ತಾರೆ. ಆದ್ರೆ ಇನ್ನೂ ಕೆಲವರು ಗಂಟೆ ಕಳೆದರ್ರೂ ಮನೆಯ ಊಟವೇ ಚೆಂದ ಅಂತಾರೆ. ಅದ್ರಲ್ಲೂ ಮಾಂಸಾಹಾರ ಪ್ರಿಯರು ಚಿಕನ್‌ನಲ್ಲಿ ಏನಾದ್ರೂ ಸ್ಪೆಷಲ್‌ ತಯಾರಿಸೋಕೆ ಇಷ್ಟಪಡ್ತಾರೆ. ಚಿಕನ್‌ ಸಾಂಬಾರ್‌, ಗ್ರೇವಿ, ಕಬಾಬ್‌ ಲಾಲಿಪಾಪ್‌ ಈ ತರಹದ ಖಾದ್ಯಗಳನ್ನೆಲ್ಲ ಸಾಮಾನ್ಯವಾಗಿ ತಯಾರಿಸಿಯೇ ಇರ್ತೀರ, ಆದ್ರೆ ಚಿಕನ್‌ ಪಾಪ್‌ಕಾರ್ನ್‌ (Chicken Popcorn) ಮಾಡ್ರೋದು ತುಂಬಾ ವಿರಳ. ಹೇಗೆ ಮಾಡಬೇಕು, ಮಸಾಲೆ ಎಷ್ಟು ಹಿಡಿಯುತ್ತೆ, ಅಷ್ಟೆಲ್ಲ ಮಾಡುವಷ್ಟರಲ್ಲಿ ರೆಸ್ಟೋರೆಂಟ್‌ನಲ್ಲಿ ಸ್ಪೈಸಿಯಾಗಿ ತಿಂದು ಬರಬಹುದಲ್ಲ ಅಂದುಕೊಳ್ತಾರೆ. ಆದ್ರೆ ಇದನ್ನ ಮನೆಯಲ್ಲೇ ಸರಳವಾಗಿ ತಯಾರಿಸಬಹುದು. ಹೇಗೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಿ….

ಚಿಕನ್‌ ಪಾಪ್‌ಕಾರ್ನ್‌ಗೆ ಬೇಕಾಗುವ ಪದಾರ್ಥಗಳು…
* ಬೋನ್ ಲೆಸ್ ಚಿಕನ್- 1 ಕೆಜ
* ಮೈದಾ- 5 ಚಮಚ
* ಉಪ್ಪು- ಅರ್ಧ ಚಮಚ
* ಈರುಳ್ಳಿ ಪುಡಿ (ಚಟ್ನಿಮಾದರಿ) – 1 ಚಮಚ
* ಶುಂಠಿ ಪುಡಿ- 1 ಚಮಚ
* ಬೆಳ್ಳುಳ್ಳಿ ಪುಡಿ- 1 ಚಮಚ
* ಅಚ್ಚ ಖಾರದ ಪುಡಿ- 1 ಚಮಚ
* ಮೊಸರು- 1 ಬಟ್ಟಲು
* ಕಾರ್ನ್‌ಫ್ಲೇಕ್ಸ್- 2 ಬಟ್ಟಲು
* ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ…

* ಮೊದಲಿಗೆ ಚಿಕನ್ ಅನ್ನು ಒಂದೊಂದು ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಮಧ್ಯಮ ಬಟ್ಟಲಿನಲ್ಲಿ ಮೈದಾ ಹಿಟ್ಟು, ಉಪ್ಪು, ಈರುಳ್ಳಿ ಪುಡಿ, ಶುಂಠಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.

* ಮತ್ತೊಂದು ಬಟ್ಟಲಿನಲ್ಲಿ ಮೊಸರನ್ನು ಹಾಕಿ ಬದಿಗಿಡಿ. ತಟ್ಟೆಯಲ್ಲಿ ಕಾರ್ನ್‌ಫ್ಲೇಕ್ಸ್ ಅನ್ನು ಪುಡಿ ಮಾಡಿ ಇಟ್ಟಿರಿ.

* ಇದೀಗ ಚಿಕನ್ ತುಂಡುಗಳನ್ನು ಮೈದಾ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಪೂರ್ತಿಯಾಗಿ ಕೋಟ್ ಮಾಡಿ. ಒಂದೊಂದೇ ಚಿಕನ್ ತುಂಡುಗಳನ್ನು ಮೊಸರಿನಲ್ಲಿ ಅದ್ದಿ, ತೆಗೆಯಿರಿ. ಹೆಚ್ಚುವರಿ ಮೊಸರು ಚಿಕನ್ ತುಂಡಿನಿಂದ ಇಳಿದು ಹೋಗುವಂತೆ ಬಿಡಿ.

* ಇದೀಗ ಕಾರ್ನ್‌ಫ್ಲೇಕ್ಸ್ ಪುಡಿಯಲ್ಲಿ ಚಿಕನ್‌ನ ಒಂದೊಂದೇ ತುಂಡನ್ನು ಹಾಕಿ ಉರುಳಿಸಿ ಕೋಟ್ ಮಾಡಿ. ಚಿಕನ್ ತುಂಡುಗಳನ್ನು ಬ್ಯಾಚ್‌ಗಳಲ್ಲಿ ಬಿಸಿ ಎಣ್ಣೆಯಲ್ಲಿ ಬಿಟ್ಟು ಡೀಪ್ ಫ್ರೈ ಮಾಡಿ.

* ಚಿಕನ್ ಚೆನ್ನಾಗಿ ಬೆಂದು, ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ಇದೀಗ ರುಚಿಕರವಾದ ಚಿಕನ್ ಪಾಪ್‌ಕಾರ್ನ್ ಸವಿಯಲು ಸಿದ್ಧ.

Share This Article