ವೀಕೆಂಡ್‍ನಲ್ಲಿ ವೆರೈಟಿ ತಿಂಡಿಗಳ ಫುಡ್ ಫೆಸ್ಟಿವಲ್

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಹೃದಯ ಭಾಗವಾದ ಫ್ರೀಡಂ ಪಾರ್ಕ್ ನಲ್ಲಿ ಆಹಾರ ಮೇಳವನ್ನು ಆಯೋಜನೆ ಮಾಡಲಾಗಿದೆ.

ರೆಡ್ ರಿಬ್ಬನ್ ಪ್ರೊ ಸಂಸ್ಥೆಯು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ 2ನೇ ಸಸ್ಯಹಾರ ಫುಡ್‍ಫೆಸ್ಟ್ ಆಯೋಜನೆ ಮಾಡಿದೆ. ಈ ಆಹಾರ ಮೇಳದಲ್ಲಿ ಆಂಧ್ರ ಪ್ರದೇಶದ ಪೋತರೇಕಲ್, ಎರಕಾರಮ್ ದೋಸೆ, ಬಾಳೆಕಾಯಿ ಬಿರಿಯಾನಿ, ಮಹಾರಾಷ್ಟ್ರದ ಮಿಸಲ್ ಪಾವ್, ತಮಿಳುನಾಡಿನ ಬ್ರಿಂಜಾಲ್ ಬಿರಿಯಾನಿ, ಬಿಹಾರದ ಲಿಟ್ಟಿ ಚೋಕಾ, ಗುಜರಾತ್ ನಫೆಡ್ಕಾ, ಉತ್ತರ ಕರ್ನಾಟಕದ ಶೈಲಿಯ ವಿವಿಧ ಬಗೆಯ ವಿಶೇಷ ಖಾದ್ಯಗಳನ್ನು ಸವಿಯಬಹುದಾಗಿದೆ. ಅದರಲ್ಲೂ ಪಂಜಾಬಿನ ಉಪ್ಪಿನಕಾಯಿ ಮತ್ತು ಹೋಂಮೇಡ್ ಐಸ್‍ಕ್ರೀಂಗಳು ಕೂಡ ದೊರೆಯುತ್ತವೆ.

ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಈ ಮೇಳವು ನಡೆಯಲಿದೆ. ದೆಹಲಿ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಆಂಧ್ರ, ಬಿಹಾರ ಸೇರಿದಂತೆ ದೇಶದ ಇತರ 15 ರಾಜ್ಯಗಳ ಸಾಂಪ್ರದಾಯಿಕ ತಿನಿಸುಗಳು ಇಲ್ಲಿ ದೊರೆಯುತ್ತವೆ. ವಿದೇಶಿಗರೂ ಮೇಳದಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ. ಎರಡು ಸಾವಿರಕ್ಕೂ ಅಧಿಕ ತಿನಿಸುಗಳು ಹಾಗೂ ಖಾದ್ಯಗಳು ಇಲ್ಲಿ ಸವಿಯಲು ಸಿಗುತ್ತವೆ.

ಮೇಳದಲ್ಲಿ 150 ಮಳಿಗೆಗಳಿದ್ದು, ಎಂಟ್ರಿ ಫೀ 20 ರಿಂದ 150 ರೂಪಾಯಿಯಾಗಿದೆ. ಮೂರು ದಿನ ನಡೆಯುವ ಈ ಮೇಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮನೆಯ ತಿಂಡಿಗಳನ್ನ ತಿಂದು ಬೇಸರವಾಗಿದ್ದರೆ ಒಮ್ಮೆ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ವಿದೇಶದ ತಿಂಡಿಗಳ ರುಚಿ ನೋಡಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *