ಬಾಗಲಕೋಟೆ: ಘಟಪ್ರಭಾ ನದಿಗೆ (Ghataprabha River) ಅಪಾರ ನೀರು ಹರಿದುಬರುತ್ತಿದ್ದು, ಮುಧೋಳ (Mudhol) ತಾಲೂಕಿನ ಸೇತುವೆಗಳು ಜಲಾವೃತವಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯಲ್ಲಿ (Belagavi District) ಸುರಿಯುತ್ತಿರುವ ಭಾರೀ ಮಳೆಯಿಂದ (Rain) ಘಟಪ್ರಭಾ ನದಿ ಮೈದುಂಬಿ ಹರಿಯು ತ್ತಿದೆ. ಬೆಳಗಾವಿ ಜಿಲ್ಲೆಯಿಂದ ನದಿಗೆ 17 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇದನ್ನೂ ಓದಿ: ಕೃಷ್ಣೆಯಲ್ಲಿ ಒಳ ಹರಿವು ಹೆಚ್ಚಳ – ನದಿ ತೀರದಲ್ಲಿ ಪ್ರವಾಹ ಭೀತಿ
ಬುಧವಾರ 10 ಸಾವಿರ ಕ್ಯೂಸೆಕ್ ಬರುತ್ತಿದ್ದರೆ ಗುರುವಾರ ಇದು 17 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯ ನಂದಗಾಂವ ಸೇತುವೆ ಜಲಾವೃತವಾಗಿದ್ದು, ಮಿರ್ಜಿ ಬಳಿಯ ಸೇತುವೆ ಜಲಾವೃತವಾಗುವ ಸಾಧ್ಯತೆಯಿದೆ. ಮುಧೋಳ ತಾಲೂಕಿನ 12 ಸೇತುವೆಗಳಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ.
ಘಟಪ್ರಭಾ ನದಿಗೆ 25 ಸಾವಿರ ಕ್ಯುಸೆಕ್‌ಗಿಂತ ಹೆಚ್ಚಿನ ನೀರು ಹರಿದುಬಂದರೆ ಎರಡ್ಮೂರು ದಿನಗಳಲ್ಲಿ ಪ್ರವಾಹ ಎದುರಾಗಲಿದೆ. ಮಾಚಕನೂರ, ಮಿರ್ಜಿ, ಚನಾಳ, ಜಾಲಿಬೇರಿ, ಯಡಹಳ್ಳಿ, ಇಂಗಳಗಿ ಗ್ರಾಮ ಗಳು ಮೊದಲ ಹಂತದಲ್ಲಿ ಜಲಾವೃತವಾಗಲಿವೆ. ತಾಲೂಕು ಆಡಳಿತದಿಂದ ನೀರಿನ ಮಟ್ಟದ ಮೇಲೆ ನಿಗಾ ವಹಿಸಲಾಗಿದ್ದು, ಪ್ರವಾಹ ಸ್ಥಿತಿ ಎದುರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.