ಇಂಜಿನ್‌ನಲ್ಲಿ ಬೆಂಕಿ; ಹಾರಾಟ ನಡೆಸುತ್ತಿದ್ದ ಯುಎಸ್‌ ಬೋಯಿಂಗ್‌ ಕಾರ್ಗೋ ವಿಮಾನದಿಂದ ಹೊಮ್ಮಿತು ಬೆಂಕಿ ಜ್ವಾಲೆ

Public TV
1 Min Read

ನ್ಯೂಯಾರ್ಕ್‌: ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಾರಾಟ ನಡೆಸುತ್ತಿದ್ದ ಅಮೆರಿಕದ ಬೋಯಿಂಗ್ ಕಾರ್ಗೋ (US Boeing Cargo) ವಿಮಾನದಿಂದ ಬೆಂಕಿ ಜ್ವಾಲೆ ಹೊರಬರುತ್ತಿದ್ದ ದೃಶ್ಯದ ವೀಡಿಯೋ ವೈರಲ್‌ ಆಗಿದೆ.

ಅಪಾಯದ ಸಂದರ್ಭದಲ್ಲಿ ಸಿಬ್ಬಂದಿ ಎಲ್ಲಾ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಿದರು. ಸುರಕ್ಷಿತವಾಗಿ MIA ಗೆ ಮರಳಿದ್ದಾರೆ ಎಂದು ಅಟ್ಲಾಸ್ ಏರ್ ಹೇಳಿಕೆಯಲ್ಲಿ ತಿಳಿಸಿದೆ. ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಅಮೆರಿಕ ಬೋಯಿಂಗ್‌ ಕಾರ್ಗೋ ವಿಮಾನ ಹಾರಾಟ ನಡೆಸಿತ್ತು. ಈ ವೇಳೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಹೊತ್ತಲ್ಲೇ ವಿಮಾನದಿಂದ ಬೆಂಕಿ ಜ್ವಾಲೆಗಳು ಹೊಮ್ಮಿವೆ. ಈ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಬೋಯಿಂಗ್‌ನ 747-8 ವಿಮಾನವು ನಾಲ್ಕು ಜನರಲ್ ಎಲೆಕ್ಟ್ರಿಕ್ GEnx ಎಂಜಿನ್‌ಗಳಿಂದ ನಿಯಂತ್ರಿಸಲ್ಪಡುತ್ತದೆ.

ಅಟ್ಲಾಸ್ ಏರ್ ಬೋಯಿಂಗ್ ಕಾರ್ಗೋ ವಿಮಾನವು ಹಾರಾಟ ನಡೆಸಿದ ಸ್ವಲ್ಪ ಹೊತ್ತಲ್ಲೇ ಇಂಜಿನ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿತು. ತಕ್ಷಣ ಎಚ್ಚೆತ್ತು ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಜನವರಿ 5 ರಂದು ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಿಂದ ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ ಅಲಾಸ್ಕಾ ಏರ್‌ಲೈನ್ಸ್ MAX 9 ಏರ್‌ಲೈನರ್ ತುರ್ತು ಲ್ಯಾಂಡಿಂಗ್ ಮಾಡಿತ್ತು. ಇದರ ಬೆನ್ನಲ್ಲೇ ಬೋಯಿಂಗ್ ಇದೇ ರೀತಿಯ ಸಮಸ್ಯೆ ಎದುರಿಸಿದೆ.

Share This Article