- ಕುರ್ಚಿ ಕದನ – ಸಿಎಂ ಪಂಚೆ ಬೇರೆಯವ್ರು ಎಳಿತಿದ್ದಾರೋ ಏನೋ ಗೊತ್ತಿಲ್ಲ
ಚಿಕ್ಕಮಗಳೂರು: ನಗರದಿಂದ (Chikkamagaluru) ತಿರುಪತಿಗೆ (Tirupati) ಸಂಚರಿಸುವ ರೈಲಿಗೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ (V.Somanna) ಚಾಲನೆ ನೀಡಿದರು. ಈ ಮೂಲಕ ಜಿಲ್ಲೆಯ ಜನರ ದಶಕಗಳ ಕನಸು ಇಂದು ನನಸಾಗಿದೆ.
ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಸೋಮಣ್ಣ ಹಸಿರು ನಿಶಾನೆ ತೋರುವ ಮೂಲಕ ರೈಲಿಗೆ ಚಾಲನೆ ನೀಡಿದರು. ಈ ವೇಳೆ, ತಿರುಪತಿಗೆ ಹೊರಟಿದ್ದ ವೃದ್ಧೆಯೊಬ್ಬರು ರೈಲಿಗೆ ಮೂರು ಬಾರಿ ನಮಸ್ಕರಿಸಿದರು. ಇದನ್ನೂ ಓದಿ: ಚಿಕ್ಕಮಗಳೂರು-ತಿರುಪತಿ ನಡುವೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭ
ರೈಲಿಗೆ ಚಾಲನೆ ನೀಡಿ, ಬಳಿಕ ಸಿಎಂ ಕುರ್ಚಿ ಕದನದ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಿಎಂ ಆಗಿ ನಾನೇ ಇರ್ತೀನಿ, ನಾನೇ ಇರ್ತೀನಿ ಎನ್ನುತ್ತಾರೆ. ನೀವು ಇದ್ದೀರೋ ಇಲ್ವೋ? ನಿಮ್ಮ ಪಂಚೆ ಬೇರೆಯವರು ಎಳೆದಿದ್ದಾರೋ ಏನೋ ಗೊತ್ತಿಲ್ಲ. ಆ ಕೆಲಸ ಮಾಡುತ್ತಿರುವವರು ನಿಮ್ಮವರೇ ಹೊರತು ನಾವಲ್ಲ. ಜನರನ್ನು ದಾರಿ ತಪ್ಪಿಸಲು ಡಿಕೆಶಿ-ಸಿದ್ದು ಇಬ್ಬರು ನಾಟಕ ಮಾಡುತ್ತಿದ್ದಾರೆ. ಇವರ ನಾಟಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೃಪಾಪೋಷಿತ ನಾಟಕ ಮಂಡಳಿ. ಏನಾದ್ರೂ ಆಗಲಿ ಜನಕ್ಕೆ ಒಳ್ಳೆಯದನ್ನ ಮಾಡಲಿ. ರಾಜ್ಯದಲ್ಲಿ ಒಂದಾದರೂ ಕೆಲಸ ಆಗ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ (Siddaramaiah) ಸಾಹೇಬ್ರೆ ಕಳೆದೋಗಿದ್ದೀರಾ? ನಿಮಗೆ ಯಾರು ತೊಂದರೆ ಮಾಡಿರೋದು ನಾವಾ? ನಿಮ್ಮ ಪಕ್ಷದವರೇ ನಿಮಗೆ ತೊಂದರೆ ಮಾಡಿರೋದು. ಗುಂಡಿ ಮುಚ್ಚಲು ಆಗಿಲ್ಲ, ಬೇರೆ ಕೆಲಸಗಳು ಆಗುತ್ತಿಲ್ಲ, ಅದರ ಬಗ್ಗೆ ನೋಡಿ. ಒಳ ಒಪ್ಪಂದ ಮಾಡಿಕೊಂಡು ಜನರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನೆಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಉತ್ತರ ಕೊಟ್ಮೇಲೆ ಎಲ್ಲಾ ಮುಗೀತು; ದೆಹಲಿಯಿಂದ ವಾಪಸ್ಸಾದ ಡಿಕೆಶಿ ಫಸ್ಟ್ ರಿಯಾಕ್ಷನ್