ಚಿತ್ರದುರ್ಗ: ನಗರದ (Chitradurga) ಬಸ್ ನಿಲ್ದಾಣ ಬಳಿ ಎರಡು ಬಸ್‍ಗಳ ನಡುವೆ ಆಟೋ ಸಿಲುಕಿ ಅಪ್ಪಚ್ಚಿಯಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಟೋಗೆ ಹಿಂಭಾಗದಿಂದ ಬಂದ ಖಾಸಗಿ ಬಸ್ ಡಿಕ್ಕಿಯಾಗಿ ಮುಂದೆ ತೆರಳುತ್ತಿದ್ದ ಸಾರಿಗೆ ಬಸ್‍ಗೆ ಅಪ್ಪಳಿಸಿದೆ. ಇದರಿಂದ ಎರಡು ಬಸ್‍ಗಳ ನಡುವೆ ಆಟೋ ಸಿಲುಕಿದೆ. ಪರಿಣಾಮ ಆಟೋ ಚಾಲಕ ಸೇರಿದಂತೆ ಐವರಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಕೊಪ್ಪಳದಲ್ಲಿ ಕೆಎಸ್‍ಆರ್‌ಟಿಸಿ ಬಸ್‍ಗೆ ಕಲ್ಲು ತೂರಾಟ
ಗಾಯಾಳುಗಳನ್ನು ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದ ಸಾರಿಗೆ ನೌಕರರು – ಇಂದಿನಿಂದ ಬಸ್ ಬಂದ್