ಬೆಂಗಳೂರು 2ನೇ ಏರ್‌ಪೋರ್ಟ್‌ ನಿರ್ಮಾಣಕ್ಕೆ 5 ಸ್ಥಳ ಗುರುತಿಸಲಾಗಿದೆ: ಎಂಬಿ ಪಾಟೀಲ್‌

Public TV
1 Min Read

ಬೆಂಗಳೂರು: ಎರಡನೇ ವಿಮಾನ ನಿಲ್ದಾಣ (Second Airport) ನಿರ್ಮಾಣಕ್ಕೆ 5 ಸ್ಥಳ ಗುರುತಿಸಲಾಗಿದೆ. ಆದರೆ ಯಾವುದೇ ಸ್ಥಳ ಅಂತಿಮವಾಗಿಲ್ಲ ಎಂದು ಸಚಿವ ಎಂಬಿ‌ ಪಾಟೀಲ್ (MB Patil) ಹೇಳಿದ್ದಾರೆ.

ವಿಧಾನಸೌಧದಲ್ಲಿ (Vidhana Soudha) ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಆಂತರಿಕ ಚರ್ಚೆ ಸಲುವಾಗಿ ಇಂದು ನಾನು‌ ಡಿಸಿಎಂ‌ ಡಿಕೆ ಶಿವಕುಮಾರ್‌ (DK Shivakumar) ಅವರ ಜೊತೆ ಸಭೆ ನಡೆಸಿದೆವು. ನಮ್ಮ ಬೆಂಗಳೂರು, ಕರ್ನಾಟಕಕ್ಕೆ ಒಳ್ಳೆಯದಾಗಬೇಕು. ಆರ್ಥಿಕ ಸ್ಥಿತಿ, ವ್ಯವಹಾರಕ್ಕೆ ಉಪಯೋಗ ಆಗಬೇಕು ಎಂದು ಹೇಳಿದರು.

ಒಂದು ವಾರದ ನಂತರ ಮತ್ತೊಂದು ಸಭೆ ಮಾಡುತ್ತೇವೆ. ಸಭೆ ನಡೆದ ಬಳಿಕ ನಿರ್ಧಾರ ಆಗಲಿದೆ.ಅಳೆದು ತೂಗಿ ಈ ನಿರ್ಧಾರ ಮಾಡುತ್ತೇವೆ. ಯಾರದ್ದು ಪರ್ಸನಲ್ ಇಲ್ಲ, ಇದೇ ಜಾಗ ಅಂತ ಇಲ್ಲ. ಡಿಸಿಎಂ ಜೊತೆ ನಗರಾಭಿವೃದ್ಧಿ ಸಚಿವರು ಕೂಡ ಇದ್ದಾರೆ ಎಂದರು.  ಇದನ್ನೂ ಓದಿ: Russia – Ukraine War | ರಷ್ಯಾ ಪರ 12,000 ಸೈನಿಕರನ್ನು ಕಳುಹಿಸಿದ ಉತ್ತರ ಕೊರಿಯಾ

ಇದಕ್ಕಾಗಿ ಇವತ್ತಿನ ಸಭೆಯಲ್ಲಿ ಸಿಎಸ್ ಅವರನ್ನು ಕರೆದಿದ್ದೆವು. ಪ್ರಿಯಾಂಕ್ ಖರ್ಗೆ ಅವರು ಕೂಡ ಬಂದಿದ್ದರು. ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೇವೆ. ದಾಬಾಸ್ ಪೇಟೆ,‌ ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿಎರಡು ಜಾಗ, ಹಾರೋಹಳ್ಳಿ ಹಾಗೂ ಬಿಡದಿ ಜಾಗ ಗುರುತಿಸಿದ್ದೇವೆ ಎಂದು ಮಾಹಿತಿ ನೀಡಿದರು.

 

Share This Article