ಶತಕ ವೀರ ಪೃಥ್ವಿ ಶಾಗೆ ಕಾಂಡೋಮ್ ಕಂಪೆನಿ ಶುಭ ಕೋರಿದ್ದು ಹೀಗೆ

Public TV
2 Min Read

ನವದೆಹಲಿ: ಟೆಸ್ಟ್ ಕ್ಯಾಪ್ ಧರಿಸಿದ ಮೊದಲ ಪಂದ್ಯದಲ್ಲೇ ಪೃಥ್ವಿ ಶಾ ಶತಕ ಸಿಡಿಸಿ ಮಿಂಚಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿರುವ ಯುವ ಆಟಗಾರನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭರಪೂರ ಶುಭಾಶಯಗಳು ಹರಿದು ಬರುತ್ತಿವೆ. ಕಾಂಡೋಮ್ ಕಂಪೆನಿಯೂ ಸಹ ತನ್ನದೇ ಶೈಲಿಯಲ್ಲಿ ಶುಭಕೋರಿರುವ ಟ್ವೀಟ್ ಸಖತ್ ವೈರಲ್ ಆಗಿದೆ.

ಡ್ಯುರೆಕ್ಸ್ ಕಂಪೆನಿಯ ಕಾಂಡೋಮ್‍ಗಳು ತನ್ನದೇ ಶೈಲಿಯ ವಿಭಿನ್ನ ಜಾಹಿರಾತುಗಳಿಂದ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಅಂತೆಯೇ ಸೆಲೆಬ್ರೆಟಿಗಳಿಗೂ ವಿಶ್ ಮಾಡುವ ಮೂಲಕ ಅವರನ್ನು ಹಿತವಾಗಿ ಕಾಲೆಳೆಯುವ ಪ್ರಯತ್ನವನ್ನು ಮಾಡುತ್ತದೆ. ಈಗ ಪೃಥ್ವಿ ಶಾಗೆ ‘ಮೊದಲ ಪ್ರಯತ್ನ ಯಾವಾಗಲೂ ಅತ್ಯಂತ ವಿಶೇಷವಾಗಿರುತ್ತದೆ. ನಿಮ್ಮ ಪ್ರಯತ್ನ ಹೀಗೆ ಮುಂದುವೆರಯಲಿ’ (It`s Always Special… when it`s the first time!) ಅಂತಾ ಶುಭಾಶಯ ತಿಳಿಸಿದೆ. ಇದನ್ನೂ ಓದಿ: ಶತಕ ಸಿಡಿಸುವುದರ ಜೊತೆ ಭಾರತದ ಪರ ದಾಖಲೆ ನಿರ್ಮಿಸಿದ ಪೃಥ್ವಿ ಶಾ!

ಈ ಹಿಂದೆ ಬಾಲಿವುಡ್ ತಾರೆ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಮದುವೆ ಸಂದರ್ಭದಲ್ಲಿ ‘ನಾವು ನಿಮ್ಮನ್ನು ಆವರಿಸಿಕೊಂಡಿದ್ದೇವೆ’ ಅಂತಾ ತಮಾಷೆ ಮಾಡಿತ್ತು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸಾಂಸರಿಕಾ ಜೀವನಕ್ಕೆ ಕಾಲಿರಿಸಿದ್ದಾಗ ‘ಡ್ಯುರೆಕ್ಸ್ ಹೊರತುಪಡಿಸಿ ನಿಮ್ಮಿಬ್ಬರ ಮಧ್ಯೆ ಏನು ಬರಬಾರದು’ ಎಂದು ಕಾಲೆಳೆದು ಮದುವೆಗೆ ವಿಶ್ ಮಾಡಿತ್ತು.

ಮೊದಲ ಟೆಸ್ಟ್ ಪಂದ್ಯದಲ್ಲೇ ವೇಗವಾಗಿ ಶತಕ ಸಿಡಿಸಿದ ಭಾರತದ ಎರಡನೇ, ವಿಶ್ವದ ಮೂರನೇ ಆಟಗಾರನೆಂಬ ಹೆಗ್ಗಳಿಕೆಗೆ ಪೃಥ್ವಿ ಶಾ ಪಾತ್ರವಾಗಿದ್ದಾರೆ. ಮೊದಲ ಎಸೆತವನ್ನು ಎದುರಿಸುವ ಮೂಲಕ ಪಾದರ್ಪಣೆಯ ಪಂದ್ಯದಲ್ಲೇ ಇನ್ನಿಂಗ್ಸ್ ಮೊದಲ ಎಸೆತವನ್ನು ಎದುರಿಸಿದ ಪ್ರಥಮ ಭಾರತೀಯ ಆಟಗಾರ ಎನ್ನುವ ದಾಖಲೆ ಸಹ ಬರೆದಿದ್ದಾರೆ. ಈ ಮೊದಲು ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಜ, ಬಾಂಗ್ಲಾದೇಶ ತಮಿಮ್ ಇಕ್ಬಾಲ್, ಪಾಕಿಸ್ತಾನ ಇಮ್ರಾನ್ ಫರ್ಹಾತ್ ತಮ್ಮ ಮೊದಲ ಪಂದ್ಯದಲ್ಲೇ ಇನ್ನಿಂಗ್ಸ್‍ನ ಮೊದಲ ಎಸೆತವನ್ನು ಎದುರಿಸಿದ್ದರು.

ಪೃಥ್ವಿ ಶಾ 56 ಎಸೆತಗಳಲ್ಲಿ 50 ರನ್ ಗಳಿಸಿ, ಏಕದಿನ ಪಂದ್ಯದಂತೆ 99 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಪಂದ್ಯದಲ್ಲಿ ವೇಗವಾಗಿ ಮೊದಲ ಶತಕ ಸಿಡಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 154 ಎಸೆತದಲ್ಲಿ 134 ರನ್ ಸಿಡಿಸಿ ದೇವೇಂದ್ರ ಬಿಶೂ ಅವರ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ಔಟಾದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *