ಭುವನೇಶ್ವರ: ದೇಶದಲ್ಲಿ ಮೊದಲ ಬಾರಿಗೆ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನೂ ಮೀರಿಸಿದ್ದು, ಒಡಿಶಾದ ಭುವನೇಶ್ವರದಲ್ಲಿ ಭಾನುವಾರ ಡೀಸೆಲ್ ಬೆಲೆ ಪ್ರತಿ ಲೀಟರ್ 80.69 ರೂ.ಗೆ ಆಗಿದ್ದರೆ ಪೆಟ್ರೋಲ್ ಬೆಲೆ 80.57 ರೂ.ಗೆ ಮಾರಾಟ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆದರೂ ಡೀಸೆಲ್ 80.69 ರೂ. ಗೆ ಮಾರಾಟವಾಗಿದ್ದು, ಪೆಟ್ರೋಲ್ ಗಿಂತ 12 ಪೈಸೆ ಹೆಚ್ಚಳವಾಗಿತ್ತು.
ಒಡಿಶಾದಲ್ಲಿ ಜಾಸ್ತಿ ಯಾಕೆ?
ಕೆಲ ತಿಂಗಳುಗಳಿಂದ ಸತತವಾಗಿ ತೈಲ ಬೆಲೆಯಲ್ಲಿ ಏರಿಕೆ ಆಗಿದ್ದು, ಡೀಸೆಲ್‍ನ ಮೂಲ ಬೆಲೆಯಲ್ಲಿ 5 ರೂ. ಹಾಗೂ ಪೆಟ್ರೋಲ್ ಬೆಲೆಯಲ್ಲಿ 8 ರೂ. ಹೆಚ್ಚಳವಾಗಿದೆ. ಪ್ರಮುಖವಾಗಿ ರಾಜ್ಯಗಳು ಬೇರೆ ಬೇರೆ ಪ್ರಮಾಣದಲ್ಲಿ ವ್ಯಾಟ್ ಅನ್ನು ತೈಲದ ಮೇಲೆ ವಿಧಿಸುತ್ತಿದೆ.
ಒಡಿಶಾ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇ.26 ರಷ್ಟು ವ್ಯಾಟ್ ವಿಧಿಸುತ್ತಿದೆ. ಇದುವೇ ಡೀಸೆಲ್ ಬೆಲೆ ಪೆಟ್ರೋಲ್‍ಗಿಂತಲೂ ಹೆಚ್ಚಾಗಲು ಕಾರಣವಾಗಿದೆ ಎಂದು ಅಲ್ಲಿನ ಪೆಟ್ರೋಲಿಯಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಂಜಯ್ ಲಾತ್ ತಿಳಿಸಿದ್ದಾರೆ. ಅಲ್ಲದೇ ಒಡಿಶಾ ಸಾರ್ವಜನಿಕರು ಅಧಿಕ ಪ್ರಮಾಣದ ಬೆಲೆಯ ಕಾರಣ ಡೀಸೆಲ್ ಖರೀದಿಯನ್ನೇ ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಟ್ ಕಡಿತಗೊಳಿಸುವಂತೆ ರಾಜ್ಯ ಸರ್ಕಾರವನ್ನು ಮತ್ತೊಮ್ಮ ಮನವಿ ಮಾಡಿದ್ದಾರೆ. ಅಲ್ಲದೇ ಕೇಂದ್ರ ಕರೆಗೆ ಸ್ಪಂಧಿಸಿರುವ 13 ರಾಜ್ಯಗಳು ಈಗಾಗಲೇ ವ್ಯಾಟ್ ಕಡಿತಗೊಳಿಸಿದೆ ಎಂದು ಉಲ್ಲೇಖಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv