ಜಾರ್ಖಂಡ್‌ನಲ್ಲಿ ಮೊದಲ ಹಂತದ ಚುನಾವಣೆ ಅಂತ್ಯ- ಶೇ. 67ಕ್ಕೂ ಹೆಚ್ಚು ಮತದಾನ

Public TV
1 Min Read

ರಾಂಚಿ: ಜಾರ್ಖಂಡ್‌ನಲ್ಲಿ (Jharkhand) ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ಮುಗಿದಿದೆ. 43 ಮತಕ್ಷೇತ್ರಗಳಲ್ಲಿ ಶೇ. 67ಕ್ಕೂ ಹೆಚ್ಚು ಮತದಾನ ನಡೆದಿದೆ. ವಯನಾಡು ಲೋಕಸಭೆ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿದೆ.

ಶೇ.65ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಶೇ.74ರಷ್ಟು ಮತದಾನವಾಗಿತ್ತು. ಮತದಾನದ ವೇಳೆ ಪ್ರವಾಹ, ಭೂಕುಸಿತದಿಂದ ಚದುರಿಹೋಗಿದ್ದವರ ಮರು ಸಂಗಮ ಆಗಿದೆ. ತಮ್ಮವರನ್ನು ಕಳೆದುಕೊಂಡಿದ್ದ ಜನ, ಮತಗಟ್ಟೆಗಳಲ್ಲಿ ಸಂಬಂಧಿಗಳು, ಆಪ್ತರನ್ನು ಕಂಡು ಭಾವುಕರಾದರು. ಹಳೆಯ ದಿನಗಳನ್ನು ಮೆಲುಕು ಹಾಕಿದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಪ್ರಿಯಾಂಕಾ ವಾದ್ರಾ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಚುನಾವಣೆಗಳ (Election) ಫಲಿತಾಂಶ ನ.23ರಂದು ಹೊರಬೀಳಲಿದೆ. ಇದನ್ನೂ ಓದಿ: ನೋಂದಣಿಗೂ ಮುನ್ನವೇ ಶುಲ್ಕ ಪಾವತಿ; ಸಿಎಂ ವಿರುದ್ಧ ಮತ್ತೊಂದು ದಾಖಲೆ ರಿಲೀಸ್!

ರಾಜಸ್ಥಾನದ ಡಿಯೋನಿ ಉಪಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ, ಚುನಾವಣಾಧಿಕಾರಿ ಕಪಾಳಕ್ಕೆ ಭಾರಿಸಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರ (Maharashtra) ಚುನಾವಣೆ ವೇಳೆಯೇ ಡಿಸಿಎಂ ಅಜಿತ್ ಪವಾರ್‌ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಫೋಟೋವನ್ನು ಪ್ರಚಾರದಲ್ಲಿ ಬಳಸಿಕೊಳ್ಳದಂತೆ ಸೂಚಿಸಿದೆ. ಸ್ವಂತ ಕಾಲಲ್ಲಿ ನಿಲ್ಲೋದನ್ನು ಕಲಿಯಿರಿ ಎಂದು ಅಜಿತ್ ಪವಾರ್‌ಗೆ ಚಾಟಿ ಬೀಸಿದೆ. ಇದನ್ನೂ ಓದಿ: ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ: ಸುನಿಲ್ ಕುಮಾರ್ ತಿರುಗೇಟು

Share This Article