ಫಸ್ಟ್ ನೈಟ್ ವಿತ್ ದೇವ: ಪ್ರಥಮ್ ಸಿನಿಮಾಗೆ ಮಾನ್ಯ ಸಿಂಗ್ ಎಂಟ್ರಿ

Public TV
1 Min Read

ಳ್ಳೆಯ ಹುಡುಗ ಪ್ರಥಮ್ (Pratham) ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ಫಸ್ಟ್ ನೈಟ್ ವಿತ್ ದೇವ’ (First Night with Deva) ಎಂದು ಹಸರಿಡಲಾಗಿದೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಮಿಸ್ ಇಂಡಿಯಾ ರನ್ನರ್ ಅಪ್ ಆಗಿರುವ ಮಾನ್ಯ ಸಿಂಗ್ (Manya Singh) ಎಂಟ್ರಿ ಕೊಡುತ್ತಿದ್ದಾರೆ. ನವೆಂಬರ್ 16ರಂದು ಈ ಸಿನಿಮಾಗೆ ಚಾಲನೆ ಸಿಗಲಿದೆ.

ಪ್ರಥಮ್ ಡಬಲ್ ಸಂಭ್ರಮದಲ್ಲಿದ್ದಾರೆ. ಇದೇ ತಿಂಗಳು ಅವರ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ನಡುವೆ ಹೊಸ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಕ್ಯಾಚಿ ಟೈಟಲ್ ನಿಂದಾಗಿ ಸಿನಿಮಾ ಗಮನ ಸೆಳೆಯುತ್ತಿದೆ. ಈ ಹಿಂದೆ ಕರ್ನಾಟಕದ ಅಳಿಯ ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಿದ್ದ ಪ್ರಥಮ್, ಇದೀಗ ಫಸ್ಟ್ ನೈಟ್ ಗೆ ಸಿದ್ಧವಾಗಿದ್ದಾರೆ.

ಈ ಸಿನಿಮಾದ ಮೂಲಕ ಕನ್ನಡಕ್ಕೆ ಬರುತ್ತಿರುವ ಮಾನ್ಯ ಈ ಹಿಂದೆ ಫೆಮಿನಾ ಮಿಸ್ ಇಂಡಿಯಾದಲ್ಲಿ ಭಾಗಿಯಾಗಿದ್ದರು. ತಂದೆ ಆಟೋ ರಿಕ್ಷಾ ಚಾಲಕ ಎನ್ನುವ ಕಾರಣಕ್ಕಾಗಿ ಸಾಕಷ್ಟು ಸುದ್ದಿ ಆಗಿದ್ದರು. ಇದೀಗ ಕನ್ನಡ ಚಿತ್ರದ ಮೂಲಕ ಅವರು ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಬಿಗ್ ಬಾಸ್ ಹಿಂದಿಯಲ್ಲೂ ಮಾನ್ಯ ಕಾಣಿಸಿಕೊಂಡಿದ್ದರು.

ಫಸ್ಟ್ ನೈಟ್ ವಿತ್ ದೇವ ಸಿನಿಮಾಗೆ ಪ್ರಥಮ್ ನಾಯಕನಾದರೆ, ಮಾನ್ಯ ಸಿಂಗ್ ನಾಯಕಿ. ಉಳಿದಂತೆ ದತ್ತಣ್ಣ, ಗೋಪಿ ಸೇರಿದಂತೆ ಹಲವರ ತಾರಾಗಣವಿದೆ. ಯೋಗರಾಜ್ ಭಟ್ ಹಾಡು ಬರೆದರೆ, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಲಿದ್ದಾರೆ.

Share This Article