‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಪೋಸ್ಟರ್ ಔಟ್- ತ್ರಿಬಲ್ ರೋಲ್‌ನಲ್ಲಿ ಅಜಿತ್?

Public TV
1 Min Read

ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly Film) ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ತ್ರಿಬಲ್ ಶೇಡ್‌ನಲ್ಲಿ ಅಜಿತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ನಟನ ಲುಕ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ:ಕಿರುತೆರೆಯಲ್ಲಿ ಶುರುವಾಯ್ತು ಬ್ರ್ಯಾಂಡ್‌ ನ್ಯೂ ಸೆಲೆಬ್ರಿಟಿ ಗೇಮ್‌ ಶೋ

‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ 3 ಲುಕ್‌ನಲ್ಲಿ ಅಜಿತ್ ಪೋಸ್ ಕೊಟ್ಟಿದ್ದಾರೆ. ಅದರಲ್ಲಿ ಮಧ್ಯದಲ್ಲಿರುವ ಅಜಿತ್ ಕೊಂಚ ದಪ್ಪ ಕಾಣಿಸಿಕೊಂಡಿದ್ದಾರೆ. ಅವರ ಕೈಗೆ ಟ್ಯಾಟೂ ಇದೆ. ಮತ್ತೊಂದರಲ್ಲಿ ಮಧ್ಯೆ ಬೆರಳು ತೋರಿಸಿದ್ದು ಬ್ಲರ್ ಮಾಡಿದ್ದಾರೆ. ಇನ್ನೊಂದರಲ್ಲಿ ಅಜಿತ್ ಯಾರೋನ್ನು ಹೊಡೆಯಲು ರೆಡಿಯಾದಂತೆ ಪೋಸ್ ಕೊಟ್ಟಿದ್ದಾರೆ. ಹಸಿರು ಮತ್ತು ಹಳದಿ ಮಿಶ್ರಿತ ಬಟ್ಟೆಯಲ್ಲಿ ಅಜಿತ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದಲ್ಲಿ ಅಜಿತ್‌ ಕುಮಾರ್ ತ್ರಿಬಲ್‌ ರೋಲ್‌ನಲ್ಲಿ ನಟಿಸುತ್ತಿದ್ದಾರಾ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

ಅಜಿತ್ ಕುಮಾರ್ ನಟನೆಯ 63ನೇ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಅಧಿಕ್ ರವಿಚಂದ್ರನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಮುಂದಿನ ವರ್ಷ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್‌ ಚಿತ್ರತಂಡ ಮಾಡಿದೆ.

ಅಂದಹಾಗೆ, ಅಜಿತ್ ಕುಮಾರ್‌ಗೆ ನಾಯಕಿಯಾಗಿ ಶ್ರೀಲೀಲಾ (Sreeleela) ನಟಿಸಲಿದ್ದಾರೆ ಎನ್ನಲಾಗಿದೆ. ಕಾಲಿವುಡ್‌ನಲ್ಲಿ ನಟಿಗೆ ಬಿಗ್ ಆಫರ್ ಸಿಕ್ಕಿದೆ ಎನ್ನಲಾಗಿದೆ.

Share This Article