ಮಸ್ಕತ್: ಇರಾನ್ (Iran) ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಭಾರತದ (India) ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತೈಲ ಟ್ಯಾಂಕರ್‌ಗೆ ಬಾಂಬ್ ಹೊತ್ತೊಯ್ಯುತ್ತಿದ್ದ ಡ್ರೋನ್ ಬೋಟ್ ಡಿಕ್ಕಿ ಹೊಡೆದು ಅದರಲ್ಲಿದ್ದ ನಾವಿಕ ಸಾವನ್ನಪ್ಪಿದ್ದಾರೆ.
ಸೋಮವಾರ ಓಮನ್ (Oman) ಕೊಲ್ಲಿಯಲ್ಲಿ ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ತೈಲ ಟ್ಯಾಂಕರ್‌ಗೆ ಡ್ರೋನ್ ಡಿಕ್ಕಿ ಹೊಡೆದು ಅದರಲ್ಲಿದ್ದ ಒಬ್ಬ ನಾವಿಕ ಸಾವನ್ನಪ್ಪಿದ್ದಾನೆ ಎಂದು ಓಮನ್ ತಿಳಿಸಿದೆ.
ರಾಜಧಾನಿ ಮಸ್ಕತ್ ಕರಾವಳಿಯ ಓಮನ್ ಕೊಲ್ಲಿಯಲ್ಲಿ ಈ ದಾಳಿ ನಡೆದಿದೆ ಎಂದು ಸರ್ಕಾರಿ ಸ್ವಾಮ್ಯದ ಓಮನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆ ಹಡಗನ್ನು MKD VYOM ಎಂದು ಗುರುತಿಸಲಾಗಿದೆ. ಮೃತ ಸಿಬ್ಬಂದಿ ಭಾರತ ಮೂಲದವರು ಎಂದು ದೃಢಪಡಿಸಿದೆ. ಈ ತೈಲ ಹಡಗಿನಲ್ಲಿದ್ದ 21 ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ನೆತನ್ಯಾಹು ಕಚೇರಿ, ಇಸ್ರೇಲಿ ವಾಯುಪಡೆಯ ಕಮಾಂಡರ್ ಮೇಲೆ ಕ್ಷಿಪಣಿ ದಾಳಿ
ಮಧ್ಯಪ್ರಾಚ್ಯ/ಪಶ್ಚಿಮ ಏಷ್ಯಾ ಪ್ರದೇಶದಾದ್ಯಂತ ಅಮೆರಿಕದ ನೆಲೆಗಳ ಮೇಲೆ ಇರಾನ್ ಪ್ರತೀಕಾರದ ಮಧ್ಯೆ ಈ ದಾಳಿಯನ್ನು ನಡೆಸಿದರು ಯಾರು ಎನ್ನುವುದು ಸದ್ಯ ವರದಿಯಾಗಿಲ್ಲ. ಇದನ್ನೂ ಓದಿ: ಕುವೈತ್ ಎಡವಟ್ಟಿಗೆ ಅಮೆರಿಕದ 3 F-15 ವಿಮಾನ ಪತನ

