ನಮಗೆ ಕುರಾನೇ ಮೊದಲ ಸಂವಿಧಾನ: ಸುಪ್ರೀಂ ತೀರ್ಪಿನ ಬಗ್ಗೆ ಮುಸ್ಲಿಂ ಮಹಿಳೆ ಪ್ರತಿಕ್ರಿಯೆ

Public TV
1 Min Read

– ಮುಸ್ಲಿಂ ಕಾನೂನನ್ನು ಪ್ರಶ್ನಿಸುವ ಯಾವುದನ್ನೂ ನಾವು ಸ್ವೀಕರಿಸಲ್ಲ ಎಂದ ಶಮೀನಾ

ನವದೆಹಲಿ: ನಮಗೆ ಕುರಾನ್‌ (Quran) ಧರ್ಮಗ್ರಂಥವೇ ಮೊದಲ ಸಂವಿಧಾನ ಎಂದು ಜಮ್ಮು-ಕಾಶ್ಮೀರದ ನ್ಯಾಷನಲ್‌ ಕಾನ್ಫರೆನ್ಸ್‌ ಮಹಿಳಾ ಘಟಕದ ಅಧ್ಯಕ್ಷೆ ಶಮೀನಾ ಫಿರ್ದೋಸ್‌ ಹೇಳಿಕೆ ನೀಡಿದ್ದಾರೆ.

ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತು. ಈ ಸಂಬಂಧ ಶಮೀನಾ ಫಿರ್ದೋಸ್‌ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕುರಾನ್‌ ಹೇಳುವ ಹಾದಿಯಲ್ಲೇ ಸಾಗುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯಲು ಅರ್ಹರು: ಸುಪ್ರೀಂ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್‌ನ ತೀರ್ಪು ಒಳ್ಳೆಯದು. ಆದರೆ ವಿಚ್ಛೇದಿತ ಮಹಿಳೆ ಜೀವನಾಂಶ ಪಡೆಯುವ ಕಾನೂನು ಮೊದಲೇ ಇದೆ. ಇದು ಮುಸ್ಲಿಂ ಕಾನೂನು ಪ್ರಕಾರವೇ ಇದೆ. ಈಗಾಗಲೇ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ನಾನು ಇಲ್ಲಿ ಇನ್ನೊಂದು ವಿಷಯ ಹೇಳುತ್ತೇನೆ. ನಮ್ಮ ಮುಸ್ಲಿಂ ಕಾನೂನನ್ನು ಪ್ರಶ್ನಿಸುವ ಯಾವುದನ್ನೂ ನಾವು ಸ್ವೀಕರಿಸುವುದಿಲ್ಲ. ಅಲ್ಲಾ ಕಳುಹಿಸಿರುವ ದೇವದೂತ ಬರೆದ ಕುರಾನ್‌ನ ಯಾವ ವಿಷಯವನ್ನೂ ನಾವು ಬದಲಿಸುವುದಿಲ್ಲ. ಆದರೆ ಸುಪ್ರೀಂ ಕೋರ್ಟ್‌ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ – ಸಿಐಎಸ್‌ಎಫ್‌ ಅಧಿಕಾರಿಗೆ ಸ್ಪೈಸ್‌ಜೆಟ್‌ ಮಹಿಳಾ ಸಿಬ್ಬಂದಿಯಿಂದ ಕಪಾಳಮೋಕ್ಷ

Share This Article