ಬಿಟ್ ಕಾಯಿನ್ ಅಕ್ರಮ ಪ್ರಕರಣದಲ್ಲಿ ಮೊದಲ ಅರೆಸ್ಟ್- ಇಬ್ಬರ ಬಂಧನ

Public TV
2 Min Read

-ಇಂದು ಕೋರ್ಟ್‌ಗೆ ಹಾಜರುಪಡಿಸಲಿರುವ ಎಸ್‌ಐಟಿ

ಬೆಂಗಳೂರು: ಬಿಟ್ ಕಾಯಿನ್ (Bit Coin) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಅರೆಸ್ಟ್ ಮಾಡಲಾಗಿದ್ದು, ಎಸ್‌ಐಟಿ (SIT) ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಮತ್ತು ಸಂತೋಷ್‌ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದು, ಸಾಕ್ಷ್ಯ ನಾಶ ಮಾಡಿದ ಹಿನ್ನೆಲೆ ಈ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಐವರನ್ನು ವಶಕ್ಕೆ ಪಡೆದಿದ್ದರು. ಬಂಧಿತರಲ್ಲಿ ಪ್ರಶಾಂತ್ ಬಾಬು ಸೈಬರ್ ಇನ್ಸ್ಪೆಕ್ಟರ್ ಆಗಿದ್ದು, ಸಂತೋಷ್ ಸೈಬರ್ ಸೆಂಟರ್ ವ್ಯಕ್ತಿ ಆಗಿದ್ದ. ಇದನ್ನೂ ಓದಿ: ಬಾಕ್ಸಿಂಗ್‌ಗೆ ಮೇರಿಕೋಮ್‌ ನಿವೃತ್ತಿ ಘೋಷಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) ಶ್ರೀಕಿಯನ್ನು 90 ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು. ಸಿಸಿಬಿ ಬಂಧನದಲ್ಲಿದ್ದಾಗ ಬಿಟ್ ಕಾಯಿನ್ ಅಕ್ರಮ ಆಗಿರೋದು ಸಾಬೀತಾಗಿದೆ. ಅಕ್ರಮ ಸಾಬೀತಾದ ಹಿನ್ನೆಲೆ ಬಂಧಿಸಲಾಗಿದೆ. ಇದನ್ನೂ ಓದಿ: ರಿಯಾಯಿತಿ ದರದಲ್ಲಿ ಅಯೋಧ್ಯೆಗೆ ಟೂರ್ ಪ್ಲ್ಯಾನ್- ಬಿಜೆಪಿಗೆ ಕಾಂಗ್ರೆಸ್ ಟಕ್ಕರ್

90 ದಿನ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ ಹೊಸ ಲ್ಯಾಪ್‌ಟ್ಯಾಪ್ ಖರೀದಿ ಮಾಡಿದ್ದರು. ಲ್ಯಾಪ್‌ಟಾಪ್ ಅನ್ನು ತಂತ್ರಜ್ಞಾನ ಬಳಸಿ ಸಾಕ್ಷ್ಯ ನಾಶ ಮಾಡಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಬಿಟ್ ಕಾಯಿನ್‌ಗಳ ವರ್ಗಾವಣೆ ಆಗಿದೆ. ಹೀಗಾಗಿ ಮಾಹಿತಿ ಆಧರಿಸಿ ಇಬ್ಬರನ್ನು ಸುದೀರ್ಘ ವಿಚಾರಣೆ ಮಾಡಿದ್ದಾರೆ. ಇನ್ನುಳಿದ ಮೂವರಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ತಲೆಗೆ ಪೆಟ್ಟು

ಇಂದು ಮೂವರು ಡಿವೈಎಸ್ಪಿಗಳನ್ನು ಎಸ್‌ಐಟಿ ವಿಚಾರಣೆಗೆ ಕರೆದಿದೆ. ಸಿಸಿಬಿಯಲ್ಲಿ ಅಧಿಕಾರಿಗಳು ಶ್ರೀಕಿಯನ್ನು ತನಿಖೆ ನಡೆಸಿದ್ದು, ಇಂದು ವಿಚಾರಣೆಗೆ ಹಾಜರಾಗಲಿದ್ದಾನೆ. ಪ್ರಕರಣದ ಕುರಿತು ಅರೆಸ್ಟ್ ಪರ್ವ ಇಂದೂ ಸಹ ಮುಂದುವರಿಯಲಿದ್ದು, ಅಕ್ರಮ ಸಾಬೀತಾದ ಹಿನ್ನೆಲೆ ತನಿಖೆಯನ್ನು ಚುರುಕುಗೊಳಿಸಲಾಗಿದೆ. ತನಿಖೆ ದೊಡ್ಡ ದೊಡ್ಡವರ ಬುಡಕ್ಕೂ ಬರುವ ಸಾಧ್ಯತೆಯಿದೆ. ಇದನ್ನೂ ಓದಿ: ಮೇಲುಕೋಟೆ ಶಿಕ್ಷಕಿ ಕೊಲೆ ಪ್ರಕರಣ – ಆರೋಪಿ ಅರೆಸ್ಟ್

ಬಂಧಿತರನ್ನು ಪೊಲೀಸರು ಇಂದು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಬಂಧಿತರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದು, 14 ದಿನ ಪೊಲೀಸ್ ಕಸ್ಟಡಿಗೆ ಪಡೆಯಲು ತಯಾರಿ ನಡೆದಿದೆ. ಇದನ್ನೂ ಓದಿ: ಜಾತ್ರೆ ವೇಳೆ ಕುಡಿದು ರಂಪಾಟ – ಮೂವರಿಗೆ ಸ್ಟೀಲ್ ಕಟರ್‌ನಿಂದ ಇರಿತ 

Share This Article