ವಕೀಲನಂತೆ ವೇಷ ಧರಿಸಿದ್ದ ವ್ಯಕ್ತಿಯಿಂದ ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ – ಮಹಿಳೆಯ ಸ್ಥಿತಿ ಗಂಭೀರ

By
1 Min Read

ನವದೆಹಲಿ: ದೆಹಲಿಯ (Dehli) ನ್ಯಾಯಾಲಯದ (Court) ಆವರಣದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬಳು (Woman) ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ (Saket Court) ಈ ಘಟನೆ ನಡೆದಿದೆ. ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಗೆ ನ್ಯಾಯಾಲಯಕ್ಕೆ ಮಹಿಳೆ ಹಾಜರಾಗಿದ್ದಳು. ಈ ವೇಳೆ ವಕೀಲರ ವೇಷದಲ್ಲಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಅಲ್ಲಿದ್ದ ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಸಂಬಂಧಿಸಿ 4 ಸುತ್ತಿನ ಗುಂಡು ಹಾರಿಸಲಾಗಿದೆ. ಗುಂಡಿನ ದಾಳಿಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸೆರಗೊಡ್ಡಿ ಮತಯಾಚನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್‌ ಪತ್ನಿ ಅಮರೇಶ್ವರಿ

ಇತ್ತೀಚೆಗಷ್ಟೇ ದೆಹಲಿಯ ದ್ವಾರಕದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಕೀಲರೊಬ್ಬರ ಗುಂಡಿಕ್ಕಿ ಹತ್ಯೆಗೈದಿದ್ದರು. ಇದಾದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಇದನ್ನೂ ಓದಿ: ಕಲಾ ವಿಭಾಗದಲ್ಲಿ ಬೆಂಗಳೂರಿನ ತಬ್ಸುಮ್ ಶೇಖ್ ಫಸ್ಟ್‌ – ಟಾಪ್‌ ವಿದ್ಯಾರ್ಥಿಗಳ ಲಿಸ್ಟ್‌ ಇಲ್ಲಿದೆ

Share This Article