ರಾಜಕೀಯ ಸಮಾರಂಭ, ಮದ್ವೆ, ಮೆರವಣಿಗೆಗಳಲ್ಲಿ ಪಟಾಕಿ ಬ್ಯಾನ್: ಹಸಿರು ಪಟಾಕಿ ಮಾತ್ರ: ಸಿಎಂ ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಹಸಿರು ಪಟಾಕಿಗಳನ್ನು (Green Firecrackers) ಬಿಟ್ಟು ಉಳಿದೆಲ್ಲಾ ಪಟಾಕಿಗಳಿಗೆ ನಿಷೇಧ ವಿಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ. ಉಳಿದ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಮನವಿಗೆ ಸಚಿವರ ಸ್ಪಂದನೆ- ವೃದ್ಧಾಶ್ರಮಕ್ಕೆ ಅಗತ್ಯ ನೇರವು ನೀಡಲು ಸೂಚನೆ

ರಾಜಕೀಯ ಸಮಾರಂಭ, ಸಮಾವೇಶ, ಕಾರ್ಯಕ್ರಮಗಳಲ್ಲಿ ಪಟಾಕಿ ಬ್ಯಾನ್ ಮಾಡಲಾಗಿದೆ. ಮದುವೆ, ಗಣೇಶ ಉತ್ಸವ, ಎಲ್ಲ ಮೆರವಣಿಗೆಗಳಲ್ಲಿ ಇನ್ಮುಂದೆ ಪಟಾಕಿ ನಿಷೇಧ ವಿಧಿಸಲಾಗಿದೆ. ಆದರೆ ದೀಪಾವಳಿಗೆ ಪಟಾಕಿ ನಿಷೇಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಸಿರು ಪಟಾಕಿ ನಿಯಾಮವಳಿಗಳಿಗೆ ವಿರುದ್ಧವಾಗಿ ಅಂಗಡಿಗಳಿದ್ದರೆ ಕ್ರಮ ಕೈಗೊಳ್ಳಲಾಗುವುದು. ಪರಿಶೀಲನೆ ಮಾಡಿ ಕ್ರಮಕ್ಕೆ ಸೂಚಿಸಿದ್ದೇವೆ. ಇನ್ಮುಂದೆ ಪಟಾಕಿ ಅಂಗಡಿಗಳಿಗೆ ಲೈಸೆನ್ಸ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಲೈಸೆನ್ಸ್‌ ಕಡ್ಡಾಯ ಮಾಡಲಾಗಿದೆ. ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಕರಾವಳಿಗರ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ಪತ್ರ: ನಳಿನ್ ಕುಮಾರ್ ಕಟೀಲ್

ಅತ್ತಿಬೆಲೆ ಪಟಾಕಿ ಅಂಗಡಿ ಅವಘಡ ಪ್ರಕರಣ ಕುರಿತು ಮಾತನಾಡಿ, 2026 ರ ವರೆಗೆ ಒಂದು ಲೈಸೆನ್ಸ್‌ ಇಶ್ಯು ಆಗಿದೆ. ಅದು ನಕಲಿ ಲೈಸೆನ್ಸ್ ಎನ್ನಲಾಗಿದೆ. ಸ್ಥಳ ಪರಿಶೀಲನೆ ಮಾಡಿ ಮೂರು ಜನ ರಿಪೋರ್ಟ್ ಕೊಡಬೇಕು. ಬಳಿಕ ಡಿಸಿ ಲೈಸೆನ್ಸ್ ಕೊಡಬೇಕು. ಇಲ್ಲಿ ರಾಮಸ್ವಾಮಿ ರೆಡ್ಡಿ ಎಂಬವನು ಮಾರಾಟ ಮಾಡೋದಕ್ಕೆ ಲೈಸೆನ್ಸ್ ತಗೊಂಡಿದ್ದಾನೆ. ಉಗ್ರಾಣಕ್ಕೆ ಲೈಸೆನ್ಸ್ ತಗೊಂಡಿಲ್ಲ. ತಮಿಳುನಾಡಿನಿಂದ ಪಟಾಕಿ ಸಾಮಾಗ್ರಿ ತಗೊಂಡಿದ್ದಾನೆ ಎಂದು ಹೇಳಿದರು.

ಸ್ಥಳೀಯ ತಹಸಿಲ್ದಾರ್, ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್, ಸ್ಥಳೀಯ ಅಗ್ನಿಶಾಮಕ ದಳ ಮುಖ್ಯಸ್ಥರ ಅಮಾನತಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನವರಾತ್ರಿಗೂ ಮುನ್ನ ರಾಜ್ಯಕ್ಕೆ `ಕತ್ತಲೆಭಾಗ್ಯ’ ಗ್ಯಾರಂಟಿ – ಸರ್ಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ: HDK ಸುದೀರ್ಘ ಟ್ವೀಟ್‌

ಲೈಸೆನ್ಸ್ ಪರಿಷ್ಕರಣೆ ಮಾಡಲು ಸೂಚನೆ ನೀಡಲಾಗಿದೆ. ಈ ಮೊದಲು 5 ವರ್ಷಕ್ಕೆ ಲೈಸೆನ್ಸ್ ಅವಧಿ ಇತ್ತು. ಈಗ ಪ್ರತಿ ವರ್ಷವೂ ಲೈಸೆನ್ಸ್ ಪಡೆಯಬೇಕಿರುವುದು ಕಡ್ಡಾಯವಾಗಿದೆ ಎಂದು ಹೇಳಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್