ದಾವಣಗೆರೆ | ವಂದೇ ಭಾರತ್‌ ರೈಲಲ್ಲಿ ಕಾಣಿಸಿಕೊಂಡ ಬೆಂಕಿ – ತಪ್ಪಿದ ಭಾರೀ ಅನಾಹುತ

Public TV
1 Min Read

ದಾವಣಗೆರೆ: ವಂದೇ ಭಾರತ್ ರೈಲಿನಲ್ಲಿ (Vande Bharat Train) ಬೆಂಕಿ ಕಾಣಿಸಿಕೊಂಡ ಘಟನೆ ದಾವಣಗೆರೆಯಲ್ಲಿ (Davangere) ನಡೆದಿದೆ.

ಧಾರವಾಡದಿಂದ ಬೆಂಗಳೂರಿಗೆ (Bengaluru) ವಂದೇ ಭಾರತ್‌ ರೈಲು ತೆರಳುತ್ತಿತ್ತು. ಈ ವೇಳೆ, ದಾವಣಗೆರೆ ಬಳಿ ಟ್ರೈನ್‌ನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಗೇಟ್‌ ಮ್ಯಾನ್‌ ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಬಳಿ ಮನರಂಜನಾ ಪಾರ್ಕ್ ಕಾಮಗಾರಿ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಕೂಡಲೇ ಎಚ್ಚೆತ್ತ ಸಿಬ್ಬಂದಿ ರೈಲನ್ನು ದಾವಣಗೆರೆಯಲ್ಲಿ ನಿಲ್ಲಿಸಿದ್ದಾರೆ. ರೈಲ್ವೇ ಪೊಲೀಸರು ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸಿಬ್ಬಂದಿ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ವಂದೇ ಭಾರತ್‌ ರೈಲಿನಲ್ಲಿದ್ದ ಪ್ರಯಾಣಿಕರು, ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ. ಇದನ್ನೂ ಓದಿ: ಜುಲೈ 1 ರಿಂದ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ – ಗ್ರಾಹಕರಿಗೆ ಏನು ಅನುಕೂಲ?

Share This Article