ಬೈಕ್ ಗ್ಯಾರೇಜ್‌ಗೆ ಬೆಂಕಿ- 8ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಭಸ್ಮ

1 Min Read

ಬಾಗಲಕೋಟೆ: ಜಿಲ್ಲೆಯ ಇಳಕಲ್ ನಗರದ ಶ್ರೀನಿವಾಸ ಚಿತ್ರಮಂದಿರ (Srinivasa Theatre) ಹತ್ತಿರ ಇರುವ ಬೈಕ್ ಗ್ಯಾರೇಜ್‌ಗೆ(Bike Garage) ಬೆಂಕಿ ತಗುಲಿ 8ಕ್ಕೂ ಹೆಚ್ಚು ಬೈಕ್‌ಗಳು ಬೆಂಕಿಗೆ (Fire) ಆಹುತಿಯಾದ ಘಟನೆ ನಡೆದಿದೆ.

ಬೆಂಕಿ ತಗುಲಿದ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅಗ್ನಿ ಅವಘಡದಲ್ಲಿ ಗ್ಯಾರೇಜ್‌ನಲ್ಲಿದ್ದ 8ಕ್ಕೂ ಹೆಚ್ಚು ಬೈಕ್‌ಗಳು ಸಂಪೂರ್ಣ ಸುಟ್ಟುಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ.

ಬೆಂಕಿ ತಗುಲು ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article