ಶಿರಸಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

Public TV
1 Min Read

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಲಾಲಗೌಡ ನಗರದ ಸಮೀಪದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುತ್ತಮುತ್ತಲ ಪ್ರದೇಶಕ್ಕೆ ಆವರಿಸಿ ಇಲ್ಲಿನ ಜನ ಭಯ ಪಡುವಂತಾಯಿತು.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿಯ ಲಾಲಗೌಡ ನಗರದ ಈ ತ್ಯಾಜ್ಯ ವಿಲೇವಾರಿ ಘಟಕ ಈ ಹಿಂದೆಯೇ ಮುಚ್ಚಲಾಗಿತ್ತು. ಘಟಕದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿ ಹಾಗೆಯೇ ಬಿಡಲಾಗಿತ್ತು.

ಉಪಯೋಗವಾಗುತ್ತಿರದ ಕಾರಣ ಈ ಘಟಕದ ತುಂಬ ಗಿಡಗಂಟೆಗಳು ಬೆಳೆದು ನಿಂತಿದ್ದವು. ಬಿಸಿಲ ತಾಪಕ್ಕೆ ಗಿಡಗಂಟೆಗಳು ಒಣಗಿದ್ದು, ಪ್ಲಾಸ್ಟಿಕ್ ಹೊದಕೆಗಳು ಕಾದು ಹೋಗಿತ್ತು‌. ಹೀಗಾಗಿ ಎಲ್ಲೋ ಬಿದ್ದ ಬೆಂಕಿ ಕಿಡಿ ಇಡೀ ಘಟಕಕ್ಕೆ ಆವರಿಸಿ ಇಲ್ಲಿನ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸಾವಿರಾರು ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

Share This Article