ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಪಾರ್ಲಿಮೆಂಟ್ ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿದಿರುವ ಘಟನೆ ಭಾನುವಾರ ನಡೆದಿದೆ. ಬೆಂಕಿ ಹೊತ್ತಿಕೊಂಡ ಕೆಲವೇ ಹೊತ್ತಿನಲ್ಲಿ ಪಾರ್ಲಿಮೆಂಟ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ.
ಸ್ತಳಕ್ಕೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿಲ್ಲ ಎಂದು ನಗರ ತುರ್ತು ಸೇವೆಗಳ ವಕ್ತಾರ ತಿಳಿಸಿದ್ದಾರೆ.
In Cape Town South Africa Parliament Building on Fire. #sabcnews pic.twitter.com/5hB6Gbi8Z5
— Sophie Mokoena (@Sophie_Mokoena) January 2, 2022
ಪಾರ್ಲಿಮೆಂಟ್‌ನ ಮೇಲ್ಚಾವಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜೊತೆಗೆ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡಕ್ಕೂ ಬೆಂಕಿ ವಿಸ್ತರಿಸಿದೆ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ದಕ್ಷಿಣ ಆಫ್ರಿಕಾ ಪಾರ್ಲಿಮೆಂಟ್ ಕಟ್ಟಡವನ್ನು 1884 ನಿರ್ಮಿಸಲಾಗಿದೆ. 1920 ಮತ್ತು 1980ರದಲ್ಲಿ ಎರಡು ಬಾರಿ ಕಟ್ಟಡವನ್ನು ದುರಸ್ತಿ ಕಾರ್ಯಕ್ಕೆ ಒಳಪಡಿಸಲಾಗಿತ್ತು.