ನಟಿ ಲೀಲಾವತಿ ಎಸ್ಟೇಟ್ ಬಳಿ ಅಗ್ನಿ ಅವಘಡ – ತಪ್ಪಿದ ಭಾರೀ ಅನಾಹುತ

Public TV
1 Min Read

ನೆಲಮಂಗಲ: ಹಿರಿಯ ನಟಿ ದಿ.ಲೀಲಾವತಿಯವರ ಎಸ್ಟೇಟ್ ಬಳಿ ಅಗ್ನಿ ಅವಘಡ ಸಂಭವಿಸಿದ್ದು, ತೋಟದ ಸಿಬ್ಬಂದಿ ಬೆಂಕಿ ನಂದಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಬೆಂಗಳೂರು (Bengaluru) ಹೊರವಲಯದ ನೆಲಮಂಗಲ (Nelamangala) ತಾಲೂಕಿನ ಸೋಲದೇವನಹಳ್ಳಿಯ ಹಿರಿಯ ನಟಿ ದಿ.ಲೀಲಾವತಿ ತೋಟದ ಪಕ್ಕದಲ್ಲಿ ಈ ಅವಘಡ ಸಂಭವಿಸಿದೆ. ಅರಣ್ಯ ಪ್ರದೇಶ ಹಾಗೂ ಅಕ್ಕಪಕ್ಕದ ರೈತರ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಇದನ್ನೂ ಓದಿ: ಡೈರೆಕ್ಟರ್ ಅಶುತೋಷ್ ಗೋವಾರಿಕರ್ ಪುತ್ರನ ಮದುವೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡ್ರು ಐಶ್ವರ್ಯಾ ರೈ ದಂಪತಿ

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿನೋದ್ ರಾಜ್ ತೋಟದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವ ಮೊದಲೇ ತೋಟದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಸ್ವಲ್ಪ ಯಾಮಾರಿದ್ದರೂ ಕೂಡ ಬೆಂಕಿ ಸಂಪೂರ್ಣವಾಗಿ ಲೀಲಾವತಿ ಎಸ್ಟೇಟ್ ಹಾಗೂ ತೋಟಕ್ಕೆ ಆವರಿಸಿಕೊಳ್ಳುತ್ತಿತ್ತು.

ಬೇಸಿಗೆ ಹಿನ್ನೆಲೆ ಒಣಗಿದ ಅರಣ್ಯದಿಂದ ಕಾಡ್ಗಿಚ್ಚು ಉಂಟಾಗಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಸಂಪೂರ್ಣವಾಗಿ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.ಇದನ್ನೂ ಓದಿ: ಮೈದಾನದಲ್ಲೇ ಕುಲದೀಪ್‌ಗೆ ಕೊಹ್ಲಿ, ರೋಹಿತ್‌ ಕ್ಲಾಸ್‌!

Share This Article