ಬೆಂಗ್ಳೂರಲ್ಲಿ ಭಾರೀ ಅಗ್ನಿ ಅವಘಡ – 40ಕ್ಕೂ ಹೆಚ್ಚು ಶೆಡ್‍ಗಳು ಬೆಂಕಿಗೆ ಆಹುತಿ

Public TV
1 Min Read

ಬೆಂಗಳೂರು: ಆಕಸ್ಮಿಕ ಅಗ್ನಿ ಅವಘಡ (Fire Accident) ಸಂಭವಿಸಿ ಕೂಲಿ ಕಾರ್ಮಿಕರು ವಾಸವಿದ್ದ 40ಕ್ಕೂ ಹೆಚ್ಚು ಶೆಡ್‍ಗಳು ಬೆಂಕಿಗೆ ಆಹುತಿಯಾದ ಘಟನೆ ವೀರಣ್ಣಪಾಳ್ಯದಲ್ಲಿ (Veerannapalya) ನಡೆದಿದೆ.

ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿ ಕೂಲಿ ಕಾರ್ಮಿಕರು ಸುಮಾರು 50 ಶೆಡ್ ನಿರ್ಮಿಸಿಕೊಂಡಿದ್ದರು. ಮೊದಲಿಗೆ ಒಂದು ಶೆಡ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೇರೆ ಶೆಡ್‍ಗಳಿಗೂ ಬೆಂಕಿ ತಗುಲಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಜನ ಹೊರಗೆ ಓಡಿ ಹೋಗಿದ್ದಾರೆ. ಇದನ್ನೂ ಓದಿ: ನೀರಿನಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆಗೆ ಹೋದ ಸೈನಿಕ ಸೇರಿ ಇಬ್ಬರು ಸಾವು

ವಿಚಾರ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮದ್ಯ ಖರೀದಿಗೆ ಹಣ ಕೊಡಲಿಲ್ಲ ಅಂತ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ

Share This Article