ಪಬ್‌ನಲ್ಲಿ ಯುವತಿಯ ಮೊಬೈಲ್ ನಂಬರ್ ಕೇಳಿ ಕಿರುಕುಳ – ಕನ್ನಡ ಸಂಘಟನೆ ಮುಖಂಡನ ವಿರುದ್ಧ FIR

2 Min Read

ಬೆಂಗಳೂರು: ಪಬ್‌ನಲ್ಲಿ ಯುವತಿಯ ನಂಬರ್ ಕೇಳಿ ಕಾರ್‌ನಲ್ಲಿ ಬರುವಂತೆ ಬಲವಂತ ಮಾಡಿದ ಆರೋಪದ ಮೇಲೆ ಕನ್ನಡಪರ ಸಂಘಟನೆ ಮುಖಂಡನ ಮೇಲೆ ಎಫ್‌ಐಆರ್ ದಾಖಲಾಗಿದೆ. ಅಷ್ಟೇ ಅಲ್ಲ, ಯುವತಿ ಹುಡುಗರನ್ನ ಕರೆಸಿ ಹಲ್ಲೆ ನಡೆಸಿದ್ದಾರೆ ಅಂತಾ ಪ್ರತಿದೂರು ಕೂಡ ದಾಖಲಾಗಿದೆ.

ಬುಧವಾರ ರಾತ್ರಿ ಸ್ನೇಹಿತೆಯರ ಗುಂಪೊಂದು ಪಾರ್ಟಿಗೆಂದು ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಪಬ್‌ವೊಂದಕ್ಕೆ ಹೋಗಿದ್ದಾರೆ. ಪಾರ್ಟಿ ಮಾಡುವಾಗ ಕನ್ನಡಪರ ಸಂಘಟನೆಯ ಮುಖಂಡನೊಬ್ಬ ಯುವತಿಯ ಮೊಬೈಲ್ ನಂಬರ್ ಕೇಳಿದ್ದಲ್ಲದೇ ಹೊರಗೆ ಹೋಗುವಾಗ ಕಾರಿಗೆ ಬರುವಂತೆ ಕೈ ಹಿಡಿದು ಎಳೆದ್ರು ಅಂತಾ ದೊಡ್ಡ ಗಲಾಟೆ ನಡೆದಿದೆ. ಸಂಘಟನೆ ಮುಖಂಡನ ವಿರುದ್ಧ ಯುವತಿ ಎಫ್‌ಐಆರ್ ಕೂಡ ದಾಖಲಿದ್ದಾರೆ. ಇತ್ತ ಸಂಘಟನೆಯ ಮುಖಂಡ ಕೂಡ ಕೌಂಟರ್ ಕಂಪ್ಲೆಂಟ್ ನೀಡಿದ್ದಾರೆ.

ಉಮೇಶ್ ಎಂಬ ವ್ಯಕ್ತಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈತ ಕನ್ನಡಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ನಾಗರಭಾವಿ ಪಬ್ ಒಂದಕ್ಕೆ ಮೂವರು ಹುಡುಗಿಯರು ಹೋಗಿದ್ದಾರೆ. ಈ ಹುಡುಗಿಯರ ಜೊತೆ ಓರ್ವ ಯುವತಿಯ ಬಾವ ಸಹ ಇದ್ದರು. ಇದೇ ಪಬ್‌ಗೆ ಈ ಉಮೇಶ್ ಸಹ ಹೋಗಿದ್ದು, ರಾತ್ರಿ ಕಂಠಪೂರ್ತಿ ಕುಡಿದು ಪಾರ್ಟಿಯಲ್ಲಿದ್ದ ಯುವತಿ ಒಬ್ಬಳಿಗೆ ನಿನ್ನ ನಂಬರ್ ಕೊಡು ಅಂತ ಕೇಳಿದ್ದ ಎನ್ನಲಾಗಿದೆ. ಅದಕ್ಕೆ ಆ ಯುವತಿ ನಿರಾಕರಿಸಿದ್ದಾಳೆ. ನಂತರ ಕಣ್ಣು ಸನ್ನೆ ಮಾಡೋದು, ಅಸಭ್ಯವಾಗಿ ವರ್ತಿಸೋದು ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಪಾರ್ಟಿ ಮುಗಿಸಿ ಹೊರಡುತ್ತಿದ್ದ ವೇಳೆ ಕ್ಯಾಬ್ ಹತ್ತೋದಕ್ಕೆ ಅಂತ ಯವತಿಯರು ಬಂದಾಗ ತಕ್ಷಣ ಈ ಉಮೇಶ್ ಸಹ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ಮಾತನಾಡಿದ್ದಾರೆ ಎಂಬಾ ಆರೋಪ ಕೇಳಿ ಬಂದಿದೆ. ನೀವೆಲ್ಲಾ ಎಂತಹ ಹುಡುಗಿಯರು ಅಂತ ಗೊತ್ತಿದೆ, ಬಾ ನೀನು ಅಂತ ಕ್ಯಾಬ್‌ನಲ್ಲಿ ಕೂರಿಸೋದಕ್ಕೆ ಅಂತ ಎಳೆದಾಡಿದ್ದಾನೆ ಎನ್ನಲಾಗಿದೆ. ಇದರಿಂದ ವ್ಯಕ್ತಿಗೂ ಮತ್ತು ಅಲ್ಲಿದ್ದ ಯುವತಿಯ ಬಾವನಿಗೂ ಮಾತಿಗೆ ಮಾತು ಬೆಳದು ನಂತರ ಇಬ್ಬರು ಸಹ ಒಬ್ಬರಿಗೊಬ್ಬರು ಕೈ ಕೈ ಮಿಲಾಸಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಉಮೇಶನ ಬೆಂಬಲಿಗರು ಮತ್ತು ಇವರು ಇಬ್ಬರು ಸಹ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ತಕ್ಷಣ ಅಲ್ಲಿದ್ದ ಪಬ್ ಸಿಬ್ಬಂದಿ ಎಲ್ಲರನ್ನು ಕಳಿಸಿಕೊಟ್ಟಿದ್ದಾರೆ.

ಘಟನೆ‌ ಇದೀಗ ಜ್ಞಾನಭಾರತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಉಮೇಶ್ ವಿರುದ್ಧ ಯುವತಿ ನೀಡಿದ ದೂರಿನನ್ವಯ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಇತ್ತ ಉಮೇಶ್ ಕೂಡ ನನ್ನ ಮೇಲೆ ಹಲ್ಲೆ ನಡೆಸಿದ್ರು ಅಂತ ಪ್ರತಿದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗ್ತಿದ್ದಂತೆ ಉಮೇಶ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

Share This Article