ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ FIR ದಾಖಲು

Public TV
1 Min Read

‘ಬೃಂದಾವನ’ ಸೀರಿಯಲ್ ನಟ ವರುಣ್ ಆರಾಧ್ಯ (Varun Aradhya) ವಿರುದ್ಧ FIR ದಾಖಲಾಗಿದೆ. ಯುವತಿಯೊಬ್ಬರಿಂದ ಬಸವೇಶ್ವರ ಸೆನ್ ಪೊಲೀಸ್ ಠಾಣೆಯಲ್ಲಿ ವರುಣ್‌ ವಿರುದ್ಧ ಕೇಸ್‌ ದಾಖಲಾಗಿದೆ. ಇದನ್ನೂ ಓದಿ:ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ

ಖಾಸಗಿ ವಿಡಿಯೋ ಮತ್ತು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಮಾಡೋದಾಗಿ ಬೆದರಿಕೆಯ ಆರೋಪದಡಿ ವರುಣ್ ಆರಾಧ್ಯ ವಿರುದ್ಧ ಯುವತಿ ದೂರು ನೀಡಿದ್ದಾರೆ. ಯುವತಿ ಜೊತೆ ಎಂಗೇಜ್ ಆಗಿದ್ದಾಗಲೇ ಬೇರೆ ಅವರೊಂದಿಗೆ ವರುಣ್ ಅಫೇರ್ ಹೊಂದಿದ್ದರು. ಅದನ್ನು ಪ್ರಶ್ನಿಸಿದ ಯುವತಿಗೆ ಖಾಸಗಿ ಫೋಟೋ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ವರುಣ್ ಬೆದರಿಸಿದ್ದ. ಮುಂದೆ ಬೇರೆಯವರನ್ನು ಮದುವೆಯಾದರೆ, ಅವನನ್ನು ಸಾಯಿಸಿ ನಿನ್ನನ್ನು ಸಾಯಿಸುತ್ತೇನೆ ಬೆದರಿಸಿದ್ದಾರೆ. ವಾಟ್ಸ್‌ಆಪ್‌ಗೆ ಖಾಸಗಿ ಫೋಟೋ ಕಳುಹಿಸಿ ಅವಾಚ್ಯ ಪದಗಳಿಂದ ವರುಣ್‌ ನಿಂದಿಸಿರೋದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಂದಹಾಗೆ, ಓರ್ವ ಯುವತಿ ಮತ್ತು ವರುಣ್ ಆರಾಧ್ಯ 2019ರಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಇಬ್ಬರೂ ಬ್ರೇಕಪ್ ಮಾಡಿಕೊಂಡರು.

Share This Article