ದ್ವೇಷದಿಂದ ನನ್ನ ಮೇಲೆ ಎಫ್‌ಐಆರ್ ಮಾಡಿದ್ದಾರೆ: ಆರ್ ಆಶೋಕ್

Public TV
1 Min Read

ಚಿಕ್ಕಚಿಕ್ಕಬಳ್ಳಾಪುರ: ನಾಗಮಂಗಲದ (Nagamangala Violence) ಪ್ರಕರಣದ ಕುರಿತು ನಾನು ಒಂದು ಟ್ವೀಟ್ ಮಾಡಿದ್ದೆ. ಅದನ್ನೇ ದ್ವೇಷವಾಗಿ ತೆಗೆದುಕೊಂಡು ನನ್ನ ಹಾಗೂ ಶೋಭಾ ಕರಂದ್ಲಾಜೆ (Shobha Karandlaje) ಮೇಲೆ ಎಫ್‌ಐಆರ್ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ನಡೆಯನ್ನು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಖಂಡಿಸಿದರು.

ಈ ಕುರಿತು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿರುವ ಅವರು, ಕೇರಳದಿಂದ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಅದೇ ರೀತಿ ನಾಗಮಂಗದಲ್ಲಿ ಘೋಷಣೆ ಕೂಗಿದ್ದರು. ವಿಧಾನಸೌಧದಲ್ಲಿ ಕೂಗಿರುವುದನ್ನು ಆ ರೀತಿ ಕೂಗೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದರು. ಹಾಗಾದರೆ ನಿಮ್ಮ ಮೇಲೆ ಯಾಕೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ ಮತ್ತೊಂದು ಪೀಳಿಗೆಯನ್ನು ನಾಶ ಮಾಡಲು ಬಿಡುವುದಿಲ್ಲ: ಮೋದಿ ಪ್ರತಿಜ್ಞೆ

ನನ್ನ ಮೇಲೆ ಈಗ ಸುಮೋಟೋ ಕೇಸ್ ಹಾಕಿಕೊಂಡಿದ್ದಾರೆ. ಪೊಲೀಸರೇ ದೂರು ಕೊಟ್ಟು ಹಾಕಿಕೊಂಡಿದ್ದಾರೆ. ಸಾರ್ವಜನಿಕರು ಯಾರೂ ಕೂಡ ದೂರು ಕೊಟ್ಟಿಲ್ಲ. ಮುಂದೆ ನಮ್ಮ ಸರ್ಕಾರ ಬರುತ್ತದೆ. ಆಗ ಏನು ಅಂತ ಗೊತ್ತಾಗುತ್ತದೆ. ಪೊಲೀಸ್ ಇಲಾಖೆ ಕಾಂಗ್ರೆಸ್ (Congress) ಸರ್ಕಾರದ ಕಪಿ ಮುಷ್ಟಿಯಲ್ಲಿ ಸಿಲುಕಿಕೊಂಡಿದೆ ಎಂದರು. ಇದನ್ನೂ ಓದಿ: ಶನಿವಾರ ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ

ವಿರೋಧ ಪಕ್ಷವನ್ನು ಬಗ್ಗಿ ಬಡಿಯಬೇಕು ಎಂದು ಯತ್ನಾಳ್, ಶೋಭಾ, ಹಾಗೂ ನನ್ನ ಮೇಲೆ ಕೇಸ್ ಹಾಕಿಸುವ ಮೂಲಕ ಸರ್ಕಾರ ಈ ರೀತಿ ಮಾಡುತ್ತಿದೆ. ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಹೇರಿದೆ, ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯಪಾಲರ ಮೇಲೂ ಸೇಡು ತೀರಿಸಿಕೊಳ್ಳುತ್ತಿದೆ. ರಾಜ್ಯಪಾಲರು, ವಿರೋಧ ಪಕ್ಷದ ನಾಯಕರು, ಹಾಗೂ ಕೇಂದ್ರ ಸಚಿವರ ಬಗ್ಗೆಯೂ ಈ ಸರ್ಕಾರಕ್ಕೆ ಗೌರವ ಇಲ್ಲ ಎಂದರು ಎಂದು ಆರೋಪಿಸಿದರು. ಇದನ್ನೂ ಓದಿ: ಕೋಲಾರಕ್ಕೆ 376 ಕೋಟಿ ರೂ. ಅನುದಾನ, ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸಿದ್ಧವಿದೆ: ಬೈರತಿ ಸುರೇಶ್

Share This Article