ನಾಗಮಂಗಲ ಪ್ರಕರಣ; ಶೋಭಾ ಕರಂದ್ಲಾಜೆ, ಆರ್ ಅಶೋಕ್ ವಿರುದ್ಧ FIR

By
1 Min Read

ಮಂಡ್ಯ: ನಾಗಮಂಗಲ ಕೋಮುಗಲಭೆ (Nagamangala Violence) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ (R Ashok) ವಿರುದ್ಧ ನಾಗಮಂಗಲ ಟೌನ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ.

ನಾಗಮಂಗಲ ಕೋಮುಗಲಭೆ ಸಂಬಂಧ ಸುಳ್ಳು ಮಾಹಿತಿ ಹಂಚಿಕೆ ಆರೋಪಡಿ ಎಫ್‌ಐಆರ್ ದಾಖಲಿಸಲಾಗಿದೆ. ನಾಗಮಂಗಲ ಘಟನೆಗೆ ಸಂಬಂಧಿಸದ ವಿಡಿಯೋ ಹಾಗೂ ಫೋಟೋ ಪೋಸ್ಟ್ ಮಾಡಿದ ಹಿನ್ನೆಲೆ ದೊಂಬಿ ಗಲಭೆಗೆ ಪ್ರಚೋದನೆ ಆರೋಪಡಿ ಎಫ್‌ಐಆರ್ ದಾಖಲಾಗಿದೆ. ಕಲ್ಲು ತೂರಿ, ಬೆಂಕಿ ಹಚ್ಚಿದವರನ್ನ ರಕ್ಷಿಸಿ, ಗಣೇಶನನ್ನು ಬಂಧಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ಪೋಸ್ಟ್ ಮಾಡಿದ್ದರು. ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ನಾಗಮಂಗಲದಲ್ಲಿ ನಡೆದ ಘಟನೆ ಎಂದು ಪೋಸ್ಟ್ ಹಾಕಿದ್ದರು. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಮತ್ತೊಂದು ಸ್ಟ್ರೈಕ್‌ – ಪೇಜರ್‌ ಆಯ್ತು ಈಗ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟ

ಇನ್ನು ನಾಗಮಂಗಲ ಘಟನೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಆರ್ ಅಶೋಕ್ ಪೋಸ್ಟ್ ಹಾಕಿದ್ದರು. ಬೇರೆಡೆ ನಡೆದ 2 ವಿಡಿಯೋ ಲಗತ್ತಿಸಿ ಆರ್ ಅಶೋಕ್ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಅಶೋಕ್ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಒಂದು ವಾರದೊಳಗೆ ಸಿಎಂ ಅಧಿಕೃತ ನಿವಾಸ ತ್ಯಜಿಸಲಿದ್ದಾರೆ ಕೇಜ್ರಿವಾಲ್

Share This Article