ವಿಜಯಪುರ/ಕಲಬುರಗಿ: ಮುಸ್ಲಿಂ ಯುವತಿಯರ ಮದುವೆಯಾದ್ರೆ 5 ಲಕ್ಷ ರೂ. ನೀಡಲಾಗುವುದು ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಯತ್ನಾಳ್ ವಿರುದ್ಧ ವಿಜಯಪುರ ಹಾಗೂ ಕಲಬುರಗಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುಸ್ಲಿಂ ಹುಡುಗಿ ಪ್ರೀತಿಸಿ ಹಿಂದೂ ಹುಡುಗ ಮದುವೆ ಆದರೆ, 5 ಲಕ್ಷ ನಗದು ಘೋಷಣೆಯನ್ನ ಯತ್ನಾಳ್ ಮಾಡಿದ್ದಾರೆ. ಕೊಪ್ಪಳದಲ್ಲಿ ಈ ರೀತಿ ಹೇಳಿಕೆ ನೀಡಿದ್ದ ಶಾಸಕರ ವಿರುದ್ಧ ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮೈನುದ್ದೀನ ಬೀಳಗಿ ದೂರು ಕೊಟ್ಟಿದ್ದರು. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ: ಯತ್ನಾಳ್ ಘೋಷಣೆ
ಧರ್ಮದ ವಿರುದ್ಧ ಅವಹೇಳನ ಹಾಗೂ ಪ್ರಚೋದನಕಾರಿ ಹೇಳಿಕೆ ಖಂಡಿಸಿ ಬೀಳಗಿ ಕೇಸ್ ನೀಡಿದ್ದಾರೆ. ಈ ದೂರನ್ನು ಗುರುವಾರ ಕೊಪ್ಪಳಕ್ಕೆ ವರ್ಗಾಯಿಸಲಾಗಿದೆ. ಇದರ ಜೊತೆಗೆ ಯತ್ನಾಳ್ ಮೇಲೆ ಕಲಬುರ್ಗಿಯಲ್ಲೂ ದೂರು ದಾಖಲಾಗಿದ್ದು, ಅದನ್ನ ವಿಜಯಪುರ ಗಾಂಧಿಚೌಕ್ ಪೊಲಿಸ್ ಠಾಣೆಗೆ ಕಳಿಸಲಾಗಿದೆ. ಈ ದೂರನ್ನು ಕೂಡ ಕೊಪ್ಪಳಕ್ಕೆ ಕಳಿಸುವ ಸಾಧ್ಯತೆ ಇದೆ.
ಖಿದ್ಮತ್ ಎ ಮಿಲ್ಲತ್ ಕಮಿಟಿ ಅಧ್ಯಕ್ಷ ಜುನೈದ್ ಖುರೇಶಿ ಎಂಬವರು ಯತ್ನಾಳ್ ವಿರುದ್ಧ ಕಲಬುರಗಿಯಲ್ಲಿ ದೂರು ಕೊಟ್ಟಿದ್ದರು. ಇದನ್ನೂ ಓದಿ: ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್ ಅರೆಸ್ಟ್