ಯುವತಿಯನ್ನು ಪ್ರೀತಿಸಿ, ಮದುವೆಯಾಗಿ ಕಿರುಕುಳ ಆರೋಪ – ಮಾಜಿ ಕಾರ್ಪೊರೇಟರ್ ದಂಪತಿ, ಪುತ್ರನ ವಿರುದ್ಧ FIR

By
1 Min Read

ತುಮಕೂರು: ಯುವತಿಗೆ ಕಿರುಕುಳ (Harassment) ನೀಡಿದ ಆರೋಪದಡಿ ತುಮಕೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ (Ex Corporator) ದಂಪತಿ ಇಂದ್ರಕುಮಾರ್-ನಳಿನಾ ಇಂದ್ರಕುಮಾರ್ ಹಾಗೂ ಪುತ್ರ ಯಶಸ್ವಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

ಸಂಸತ್ರ ಯುವತಿಗೆ ಪ್ರೀತಿಯ ಹೆಸರೇಳಿ, ಮಾಜಿ ಕಾರ್ಪೊರೇಟರ್ ದಂಪತಿ ಪುತ್ರ ಯಶಸ್ವಿ ಮದುವೆಯಾಗಿದ್ದಾನೆ. ಬಳಿಕ ಕಿರುಕುಳ ನೀಡಿ ಸಂತ್ರಸ್ತೆಯನ್ನು ಹೊರಹಾಕಿದ್ದು, ಇನ್ನೊಬ್ಬ ಯುವತಿಯನ್ನು ಮದುವೆಯಾಗಲು ಹೊಂಚು ಹಾಕಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ. ಜೊತೆಗೆ ಚಿನ್ನಾಭರಣವನ್ನೂ ಆರೋಪಿ ಯಶಸ್ವಿ ದೋಚಿದ್ದಾನೆ ಎಂದು ದೂರಲಾಗಿದೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸಹೋದರಿ ಮೇಲೆ ಮೊಟ್ಟೆ ಎಸೆತ

ಮದುವೆ ಆದ ಬಳಿಕ ಅತ್ತೆ, ಮಾವ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರಿಗೆ ದೂರು ನೀಡಿದರೆ ಖಾಸಗಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಆರೋಪವನ್ನೂ ಸಂತ್ರಸ್ತೆ ಹೊರಿಸಿದ್ದಾರೆ. ಘಟನೆ ಸಂಬಂದ ದಾಂಪತ್ಯದ ಕಾನೂನು ಉಲ್ಲಂಘನೆ, ಹಲ್ಲೆ, ಬೆದರಿಕೆ, ಶಾಂತಿ ಭಂಗ ಮಾಡುವ ಉದ್ದೇಶದಿಂದ ಅವಮಾನ ಸಂಬಂಧ ಬಿಎನ್‌ಎಸ್‌ಎಸ್ ಅಡಿ ತುಮಕೂರು ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ದಂಪತಿ ಹಾಗೂ ಪುತ್ರ ನಾಪತ್ತೆಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ – ನೋಯ್ಡಾದಲ್ಲಿ ಆರೋಪಿ ಅರೆಸ್ಟ್

Share This Article