– ಖಾಸಗಿ ಫೋಟೋ, ವಿಡಿಯೋಗಳನ್ನು ಇಟ್ಟುಕೊಂಡು ವಂಚಿಸಿರೋ ಆರೋಪ
– ಮನೆ, ಬ್ಯೂಟಿ ಪಾರ್ಲರ್ ಮಾಡ್ಸಿಕೊಡ್ತೀನಿ ಅಂದಿದ್ದ ಇನ್ಸ್‌ಪೆಕ್ಟರ್
ಬೆಂಗಳೂರು: ಮದುವೆಯಾಗ್ತೀನಿ ಅಂತ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದ ಡಿಜೆ ಹಳ್ಳಿ ಇನ್ಸ್‌ಪೆಕ್ಟರ್ ಸುನಿಲ್ ವಿರುದ್ಧ ಪೂರ್ವ ವಿಭಾಗದ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಡಿ.ಜೆ ಹಳ್ಳಿ ಇನ್ಸ್‌ಪೆಕ್ಟರ್ ಸುನಿಲ್ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೂರ್ವ ವಿಭಾಗದ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 69,75,(1)75(2)351(2) ಕಾಯ್ದೆ ಅಡಿ ಡಿ.ಜೆ ಹಳ್ಳಿ ಇನ್ಸ್‌ಪೆಕ್ಟರ್ ಸುನಿಲ್ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮದುವೆಯಾಗ್ತೀನಿ ಅಂತ ನಂಬಿಸಿ ರೇಪ್ – ಡಿಜೆ ಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ದೂರು
ಸಂತ್ರಸ್ತೆ ದೂರಿನಲ್ಲಿ ಏನಿದೆ?
ನಿನ್ನನ್ನು ಮದುವೆಯಾಗ್ತೀನಿ, ಮನೆ ಕೊಡಿಸ್ತಿನಿ, ಬ್ಯೂಟಿ ಪಾರ್ಲರ್ ಓಪನ್ ಮಾಡಿ ಕೊಡ್ತೀನಿ. ನಿನ್ನ ಲೈಫ್ ಸೆಟಲ್ ಮಾಡ್ತೀನಿ ಎಂದು ಹೇಳಿ ಮರುಳು ಮಾಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಕಳೆದ ಒಂದು ವರ್ಷದಲ್ಲಿ ಎರಡ್ಮೂರು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಡಿಜೆ ಹಳ್ಳಿಯ 8ನೇ ಮೈಲಿಯಲ್ಲಿರುವ ತಮ್ಮ ಮನೆ ಮತ್ತು ಹೋಟೆಲ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದಾರೆ. ಆದ್ರೆ ಇದೀಗ ನಮ್ಮ ವಿಚಾರ ಯಾರಿಗಾದರೂ ಹೇಳಿದ್ರೆ ಕೊಲೆ ಮಾಡುತ್ತೇವೆಂದು ಹೇಳಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ನನ್ನ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇನ್ನೂ ಪ್ರತಿಬಾರಿ ವಿಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ಡಿಜಿ ಕಚೇರಿಗೆ ದೂರು ನೀಡಿ, ನ್ಯಾಯಾ ಕೊಡಿಸಿ ಎಂದು ಮನವಿಮಾಡಿಕೊಂಡಿದ್ದರು.ಇದನ್ನೂ ಓದಿ: ಖಾಸಗಿ ಭಾಗ ಮುಟ್ಟಿ, ರೂಮ್ ಬುಕ್ ಮಾಡಿದ್ದೇನೆ ಸಹಕರಿಸು ಅಂತಿದ್ದ – ಚಿಕಿತ್ಸೆಗೆ ಬಂದಿದ್ದ ಯುವತಿಗೆ ಕಿರುಕುಳ, ವೈದ್ಯ ಅರೆಸ್ಟ್
