ಬಿಎಂಟಿಸಿ ಬಸ್ ಅಪಘಾತದಲ್ಲಿ ಯುವತಿ ಬಲಿ ಪ್ರಕರಣ – ಕಂಡಕ್ಟರ್‌ ಅಮಾನತು, ಚಾಲಕ ವಜಾ

By
1 Min Read

– ಕಂಡಕ್ಟರ್, ಡ್ರೈವರ್ ವಿರುದ್ಧ FIR ದಾಖಲು

ಬೆಂಗಳೂರು: ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ ಹೋಟೆಲ್‌ಗೆ ಡಿಕ್ಕಿಯಾದ ಪರಿಣಾಮ ಯುವತಿಯೊಬ್ಬಳು ಬಲಿಯಾಗಿರುವ ಪ್ರಕರಣ ಸಂಬಂಧ ಕಂಡಕ್ಟರ್ ಹಾಗೂ ಡ್ರೈವರ್ ವಿರುದ್ಧ ಪೀಣ್ಯ ಪೊಲೀಸ್ (Peenya Police) ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈಗಾಗ್ಲೇ ಕಂಡಕ್ಟರ್‌ನನ್ನು ಬಿಎಂಟಿಸಿ ಅಮಾನತು ಮಾಡಿದೆ. ಇದೀಗ ಬಸ್ ಚಾಲಕನನ್ನೂ ಕೆಲಸದಿಂದ ವಜಾ ಮಾಡಲು ಟಾಟಾ ಮೋಟರ್ ಸಂಸ್ಥೆ ನಿರ್ಧಾರ ಮಾಡಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ- ಎಸ್‍ಐಟಿ ರಚಿಸಿದ ಸರ್ಕಾರ

ಏನಿದು ಪ್ರಕರಣ?
ಜುಲೈ 18ರಂದು ಬೆಳಗ್ಗೆ ಪೀಣ್ಯ (Peenya) 2ನೇ ಹಂತದಲ್ಲಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ನಡುವೆ ಜಗಳವಾಗಿತ್ತು. ಈ ವೇಳೆ ಡ್ರೈವರ್ ಬಸ್‌ನಿಂದ ಕೆಳಗಿಳಿದು ಹೋಗಿದ್ದ. ಈ ವೇಳೆ ಕಂಡಕ್ಟರ್ ಬಸ್ ಚಲಾಯಿಸಿದ್ದ. ಈ ಸಂದರ್ಭ ಬಸ್ ನಿಯಂತ್ರಣ ತಪ್ಪಿ, ಫುಟ್‌ಪಾತ್ ಏರಿ ಹೋಟೆಲ್‌ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಹೋಟೆಲ್ ಬಳಿ ನಿಂತಿದ್ದ ಓರ್ವ ಯುವತಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು.

Share This Article