ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಗೆ ಪೊಲೀಸರಿಂದ ನೋಟಿಸ್

Public TV
2 Min Read

ಟ ದರ್ಶನ್ (Darshan) ವಿರುದ್ಧ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ನಿನ್ನೆ (ಅ.31) ಕೇಸ್ ದಾಖಲಾಗಿದ್ದು, ದರ್ಶನ್ ಸಾಕಿದ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟ ದೂರುದಾರೆಗೆ ಇದೀಗ ನೋಟಿಸ್ ನೀಡಲಾಗಿದೆ. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ದೂರುದಾರೆ ಅಮಿತಾ ಜಿಂದಾಲ್ ಕೇಸ್ ದಾಖಲಿಸಿದ್ದರು. ಇದೀಗ ಈ ಮಹಿಳೆಗೆ ಆರ್‌ಆರ್ ನಗರ ಪೋಲಿಸರು ನೋಟಿಸ್ ನೀಡಿದ್ದಾರೆ.

ನಟ ದರ್ಶನ್ ಸಾಕಿದ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟ ದೂರುದಾರೆ ಅಮಿತಾಗೆ ಆರ್‌ಆರ್ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ದರ್ಶನ್ ವಿರುದ್ಧ ಎಫ್‌ಐಆರ್ ಹಾಕಲಾಗಿತ್ತು. ಆದರೆ ಹೇಳಿಕೆ ರೂಪದಲ್ಲಿ ದಾಖಲಾಗಿರಲಿಲ್ಲ. ನಾಯಿ ಕಚ್ಚಿ ಗಾಯವಾಗಿರೋದ್ರಿಂದ ಬರೋಕೆ ಆಗಲ್ಲ ಎಂದು ದೂರುದಾರೆ ತಿಳಿಸಿದ್ದಾರೆ. ಇದೀಗ ಮೊದಲು ಹೇಳಿಕೆ ದಾಖಲಿಸುವಂತೆ ಆರ್‌ಆರ್ ನಗರದ ಪೊಲೀಸರು ನೊಟೀಸ್ ನೀಡಿದ್ದಾರೆ. ಇದನ್ನೂ ಓದಿ:ಕಾರ್ತಿಕ್‌ಗೆ ‘ಬಳೆಗಳ ರಾಜ’ ಎಂದು ಟೀಕಿಸಿದ ವಿನಯ್ ಗೌಡ

ನಡೆದ ಘಟನೆಯ ಬಗ್ಗೆ ಸ್ವತಃ ದೂರುದಾರರಾದ ಅಮಿತಾ ಜಿಂದಾಲ್ ನಿನ್ನೆ (ಅ.31) ಪ್ರತಿಕ್ರಿಯೆ ನೀಡಿದ್ದರು. ಆರ್‌ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದಾಗ ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವು. ದರ್ಶನ್‌ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಕೇಳಿದೆ, ಆಗ ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದರು ಎಂದು ಅಮಿತಾ ಮಾತನಾಡಿದ್ದರು.

ಮಾತಿನ ಚಕಮಕಿಯ ಬಳಿಕ ನಾಯಿಗಳು ತನ್ನ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ. ಅವರ ಸಿಬ್ಬಂದಿ ನಾಯಿಗೆ ಇಂಜೆಕ್ಷನ್ ಆಗಿದೆ ಹೋಗಿ ಎಂದು ಕಳುಹಿಸಿಬಿಟ್ರು. ಸ್ನೇಹಿತರ ಮಗನ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಆರ್‌ಆರ್ ನಗರ ಪೊಲೀಸ್ ಠಾಣೆಗೆ ಹೋಗಿ ಘಟನೆ ಸಂಬಂಧ ದೂರು ನೀಡಿದ್ದೇನೆ ಎಂದು ವಿವರಿಸಿದ್ದರು.

ಸಿಬ್ಬಂದಿಯನ್ನ ಮೊದಲ ಆರೋಪಿ, ದರ್ಶನ್‌ರನ್ನು ಎರಡನೇ ಆರೋಪಿಯನ್ನಾಗಿಸಿ ಪ್ರಕರಣ ದಾಖಲು ಮಾಡಲಾಗಿತ್ತು. ದರ್ಶನ್ ಅವರು ಯಾವುದೇ ಕರೆ ಮಾಡಿಲ್ಲ ಮತ್ತು ಭೇಟಿ ಮಾಡಲಿಲ್ಲ. ಯಾರೋ ವ್ಯಕ್ತಿಯೊಬ್ಬರು ಆಸ್ಪತ್ರೆಯ ಖರ್ಚು ಭರಿಸೋದಾಗಿ ತಿಳಿಸಿದ್ದರು. ಅವರು ಯಾರು ಎಂದು ತಿಳಿದು ಬಂದಿಲ್ಲ. ಪೊಲೀಸರು ನಮಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಸ್ ದಾಖಲಾಗಿದೆ, ತನಿಖೆ ನಡೆಯಲಿ ಎಂದು ಗಾಯಗೊಂಡ ಮಹಿಳೆ ಅಮಿತಾ ಹೇಳಿಕೆ ನೀಡಿದ್ದರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್