ಹಾವೇರಿ | ಗಣೇಶ ಮೆರವಣಿಗೆ ವೇಳೆ ಡಿಜೆ ಹಾಕಿದ 16 ಮಂದಿ ವಿರುದ್ಧ ಎಫ್‌ಐಆರ್

Public TV
1 Min Read

– ಡಿಜೆ ವಶಕ್ಕೆ ಪಡೆದ ಪೊಲೀಸರು

ಹಾವೇರಿ: ಗಣೇಶ ಮೆರವಣಿಗೆ (Ganesh Procession) ವೇಳೆ ಡಿಜೆ (DJ) ಹಾಕಿದ 16 ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಹಾವೇರಿ (Haveri) ನಗರದ ವಿವಿಧೆಡೆ ಗಣೇಶ ವಿಸರ್ಜನೆ ವೇಳೆ ಡಿಜೆ ಹಾಕಿ, ಹಿಂದೂ ಕಾರ್ಯಕರ್ತರು ಹಾಗೂ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಇದೀಗ ಹಾವೇರಿ ನಗರ ಪೊಲೀಸರು ಡಿಜೆಯನ್ನು ವಶಕ್ಕೆ ಪಡೆದು, ಸುಭಾಷ್ ಸರ್ಕಲ್ ಗಜಾನನ ಉತ್ಸವ ಸಮಿತಿ ಮುಖಂಡರು, ಹಾವೇರಿ ಕಾ ರಾಜಾ ಗಣಪತಿ ಉತ್ಸವ ಸಮಿತಿ ಹಾಗೂ ಡಿಜೆ ಮಾಲೀಕರ ವಿರುದ್ಧ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಆರೋಪದಡಿ ಕೇಸ್ ದಾಖಲಿಸಿಕೊಂಡಿದ್ದಾರೆ.

ರಾತ್ರಿ 12 ಗಂಟೆವರೆಗೆ ಡಿಜೆ ಬಳಸಿ, ಸಾರ್ವಜನಿಕರ ಶಾಂತಿಗೆ ಭಂಗ ತಂದಿದ್ದಾರೆಂಬ ಆರೋಪದಡಿ 16 ಜನರ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ಅಲ್ಲದೇ ಗಜಾನನ ಉತ್ಸವ ಸಮಿತಿಯ 16 ಸದಸ್ಯರಾದ ನಿಖಿಲ್, ಶಿವರಾಜ್, ಬಸವರಾಜ್, ಕಿರಣ್, ಗಂಗಾಧರ್, ಆಕಾಶ, ರಾಘವೇಂದ್ರ, ಈರಣ್ಣ, ಸಿದ್ದಲಿಂಗಪ್ಪ, ಜೀವನ್, ಪವನ್, ಗಿರೀಶ್, ಮನೋಜ್, ಹರೀಶ್ ಕುಮಾರ್ ಸೇರಿದಂತೆ 16 ಜನರ ಮೇಲೆ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article