ಅಭಿನಂದನ್ ಹಸ್ತಾಂತರಕ್ಕೆ ಪಾಕ್ ನಾಟಕ- 4 ಗಂಟೆ ಬಳಿಕ ಭಾರತಕ್ಕೆ ಒಪ್ಪಿಸಿದ ವೈರಿರಾಷ್ಟ್ರ

Public TV
2 Min Read

– ವೀರಪುತ್ರನಿಗೆ ದೇಶಾದ್ಯಂತ ಶುಭಾಶಯ

ನವದೆಹಲಿ: ಕಪಟ, ನಾಟಕ, ವಿಳಂಬ ಮಾಡಿ ಕೊನೆಗೂ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ, ಭಾರತಕ್ಕೆ ಹಸ್ತಾಂತರಿಸಿದೆ. ಶುಕ್ರವಾರ ಮಧ್ಯಾಹ್ನವೇ ಅಭಿನಂದನ್ ರಿಲೀಸ್ ಆಗ್ತಾರೆ ಎಂದು ವಾಘಾ ಗಡಿಯಲ್ಲಿ ಸಕಲ ಸಿದ್ಧತೆ ನಡೆದಿತ್ತು. ಜೊತೆಗೆ ವೀರಯೋಧನ ಸ್ವಾಗತಕ್ಕೆ ಇಡೀ ದೇಶವೇ ಕಾದು ಕುಳಿತಿತ್ತು. ಆದರೆ, ಪಾಕಿಸ್ತಾನ ಮಾತ್ರ ತನ್ನ ಎಂದಿನ ಚಾಳಿ ಮುಂದುವರಿಸಿತ್ತು. ವಿನಾಕಾರಣ ವಿಳಂಬ ಮಾಡಿ ರಾತ್ರಿ 9 ಗಂಟೆಯ ನಂತರ ಭಾರತಕ್ಕೆ ಹಸ್ತಾಂತರಿಸಿತು.

ಭಾರತದ ಕೆಚ್ಚೆದೆಯ ವೀರ, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ 60 ಗಂಟೆಗಳ ಬಳಿಕ ತಾಯ್ನಾಡಿಗೆ ಸುರಕ್ಷಿತರಾಗಿ ವಾಪಸ್ ಆಗಿದ್ದಾರೆ. ಪಾಕಿಸ್ತಾನಿ ಗಡಿ ಅಧಿಕಾರಿಗಳು ಕಾಗದ ಪತ್ರ ಪರಿಶೀಲನೆಗೆ ಸುಧೀರ್ಘ ಸಮಯ ತೆಗೆದುಕೊಂಡಿದ್ದೇ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ ಎನ್ನಲಾಗಿದೆ.

ಪಾಕಿಸ್ತಾನದ ಅಧಿಕಾರಿಗಳು ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಅವರು ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಕರೆತಂದಿದ್ದರು. ಸ್ಥಳದಲ್ಲಿದ್ದ ಐಎಎಫ್ ಅಧಿಕಾರಿಗಳಾದ ಏರ್‍ವೈಸ್ ಮಾರ್ಷಲ್‍ಗಳಾದ ಆರ್‍ಜಿಕೆ ಕಪೂರ್ ಮತ್ತು ಶ್ರೀಕುಮಾರ್ ಪ್ರಭಾಕರನ್ ಸ್ವಾಗತಿಸಿದ್ರು. ಹಸ್ತಾಂತರದ ವೇಳೆ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು. ಇದನ್ನೂ ಓದಿ: ವೀರ ಯೋಧ ‘ಅಭಿ’ನಂದನ್‍ಗೆ ನಮೋ ಎಂದ ಮೋದಿ

ಸ್ವದೇಶಕ್ಕೆ ಬಂದ ತಕ್ಷಣ `ಗುಡ್ ಟು ಬಿ ಬ್ಯಾಕ್’ ಅಂತ ಅಭಿನಂದನ್ ಪ್ರತಿಕ್ರಿಯಿಸಿದ್ರು. ಈ ವೇಳೆ, ಗಡಿಯಲ್ಲಿ ತುಂಬಿ ತುಳುಕುತ್ತಿದ್ದ ಜನಸ್ತೋಮ ವಂದೇ ಮಾತರಂ. ಭಾರತ್ ಮಾತಾಕಿ ಜೈ. ವೆಲ್ ಕಂ ಬ್ಯಾಕ್ ಅಭಿನಂದನ್ ಎಂದು ಘೋಷಣೆ ಕೂಗುತ್ತಾ ಅದ್ಧೂರಿ ಸ್ವಾಗತ ಕೋರಿದರು. ಬಳಿಕ ಅಮೃತಸರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯ್ತು. ನಂತರ ಐಎಫ್‍ಎಫ್ ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಯಿತು. ದೆಹಲಿಯಲ್ಲಿರುವ ಅಭಿನಂದನ್‍ಗೆ ಜೊತೆ ಸೇನಾಧಿಕಾರಿಗಳು ಸಮಾಲೋಚನೆ ನಡೆಸಲಿದ್ದಾರೆ ಎಂದು ಏರ್ ವೈಸ್ ಮಾರ್ಷಲ್ ಆರ್‍ಜಿಕೆ ಕಪೂರ್ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮದ ಆವಂತಿಪೋರ್‍ನಲ್ಲಿ ಫೆಬ್ರವರಿ 14ರಂದು ಆದಿಲ್‍ದಾರ್ ಎಂಬ ಜೈಶ್ ಉಗ್ರ ಸಿಆರ್‍ಪಿಎಫ್‍ನ ವಾಹನಕ್ಕೆ ಆತ್ಮಾಹುತಿ ದಾಳಿ ಮಾಡಿ 40 ಯೋಧರನ್ನು ಕೊಂದಿದ್ದ. ಇದರಿಂದ ಕೆರಳಿದ್ದ ಭಾರತ ಪಾಕಿಸ್ತಾನದ ಬಾಲಕೋಟ್‍ನಲ್ಲಿ 3 ದಿನಗಳ ಹಿಂದೆ ಜೈಶ್ ಉಗ್ರರ ಟೆರರ್ ಕ್ಯಾಂಪ್‍ಗಳನ್ನು ಭಾರತ ಏರ್‍ಸ್ಟ್ರೈಕ್ ಮೂಲಕ ಉಡೀಸ್ ಮಾಡಿತ್ತು. ಬಳಿಕ ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿತ್ತು. ಈ ವೇಳೆ, ಗಡಿಯಲ್ಲಿ ಪಾಕಿಸ್ತಾನದ ಎಫ್-16 ವಾರ್ ಜೈಟ್ ಅನ್ನು ಅಭಿನಂದನ್ ಅವರು ಮಿಗ್-21ನಿಂದ ಹೊಡೆದುರುಳಿಸಿದ್ದರು. ದಾಳಿಯಲ್ಲಿ ಅಭಿನಂದನ್ ಪ್ಯಾರಾಚೂಟ್‍ನಿಂದ ಇಜೆಕ್ಟ್ ಆಗಿದ್ದರು. ದುರಾದೃಷ್ಟವಶಾತ್ ಪ್ಯಾರಾಚೂಟ್ ಪಾಕಿಸ್ತಾನದ ಗಡಿಯಲ್ಲಿ ಇಳಿದಿತ್ತು.

https://www.youtube.com/watch?v=ArvRnqPs81s

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *