ಎಲ್ಲ ಕಷ್ಟಗಳನ್ನು ನಿವಾರಿಸಿ ಅಪ್ಪಾಜಿ ನೋಡಲು ಸ್ವೀಡನ್‍ನಿಂದ ಬಂದ ದರ್ಶನ್!

Public TV
2 Min Read

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಲ್ಯಾಂಡ್ ಆಗಿದ್ದಾರೆ.

ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ಮೂಲಕ ಮೃತ ಶರೀರ ಬಂದ ಬಳಿಕ ದರ್ಶನ್ ಅಂಬಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಅಂಬಿ ಮೃತದೇಹಕ್ಕೆ ದರ್ಶನ್ ಹೆಗಲು ನೀಡಿದರು.

ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು.

ತಡವಾಗಿದ್ದು ಯಾಕೆ?
ಭಾರತ ಹಾಗೂ ಸ್ವೀಡನ್ ದೇಶಕ್ಕೆ ನೇರವಾದ ವಿಮಾನವಿಲ್ಲ. ದುಬೈ ಮೂಲಕ ಭಾರತಕ್ಕೆ ಪ್ರಯಾಣ ಮಾಡಬೇಕು. ಸ್ವೀಡನ್‍ನಿಂದ ಭಾರತಕ್ಕೆ ಅಂದಾಜು 7 ಸಾವಿರ ಕಿ.ಮೀ ದೂರವಿದೆ. ಹೀಗಾಗಿ ದರ್ಶನ್ ಸ್ವೀಡನ್‍ನಿಂದ ದುಬೈಗೆ ಬಂದು, ದುಬೈನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬಂದಿದ್ದಾರೆ.

ಸ್ವೀಡನ್‍ನಿಂದ ದುಬೈ, ಟರ್ಕಿ, ಇರಾಕ್, ರೋಮೆನಿಯಾ, ಪೋಲೆಂಡ್ ಸೇರಿದಂತೆ ಹಲವು ದೇಶಗಳನ್ನು ದಾಟಿ ಭಾರತಕ್ಕೆ ಬರಬೇಕು. ಮೊದಲೇ ಟಿಕೆಟ್ ಬುಕ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಶನಿವಾರ ರಾತ್ರಿಯೇ ತುರ್ತಾಗಿ ಭಾನುವಾರ ವಿಮಾನ ಟಿಕೆಟ್ ಬೇಕಾದರೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ನಮಗೆ ಬೇಕಾದ ಸಮಯಕ್ಕೆ ಸಿಗುವುದು ಬಹಳ ಕಷ್ಟ. ಈ ಎಲ್ಲ ಕಷ್ಟಗಳನ್ನು ನಿವಾರಿಸಿ ದರ್ಶನ್ ಸೋಮವಾರ ಬೆಳಗ್ಗೆ 9.20ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದರು.

ಅಂಬಿ ನಿಧನದ ಸುದ್ದಿ ಕೇಳಿ ಚಿತ್ರತಂಡದ ಎಲ್ಲ ಸದಸ್ಯರು ಬೆಂಗಳೂರಿಗೆ ಬರುತ್ತೇವೆ ಎಂದು ದರ್ಶನ್ ಹೇಳಿದ್ದರು. ಆದರೆ ಇಂದು ದರ್ಶನ್ ಒಬ್ಬರೇ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಭಾರತದ ಸಮಯಕ್ಕೂ ಸ್ವೀಡನ್ ಸಮಯಕ್ಕೂ 4.30 ಗಂಟೆ ವ್ಯತ್ಯಾಸವಿದೆ. ಅಂಬರೀಶ್ ನಿಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು ರಾತ್ರಿ 9.50ರ ವೇಳೆಗೆ. ಭಾರತದಲ್ಲಿ ರಾತ್ರಿ 10 ಗಂಟೆಯಾದರೆ ಸ್ವೀಡನ್ ನಲ್ಲಿ ಸಂಜೆ 5.30 ಸಮಯ ಆಗಿರುತ್ತದೆ.

ದರ್ಶನ್ ಹಾಗೂ ಅಂಬರೀಶ್ ಅವರ ಸಂಬಂಧ ತಂದೆ-ಮಗವಿನ ರೀತಿ ಇತ್ತು. ಅಂಬರೀಶ್ ಅವರ ಪ್ರತಿಯೊಂದು ಹುಟ್ಟುಹಬ್ಬಕ್ಕೆ ದರ್ಶನ್ ಮೊದಲ ಕೇಕ್ ತರುತ್ತಿದ್ದರು. ಅಲ್ಲದೇ ದರ್ಶನ್, ಅಂಬರೀಶ್ ಅವರ ಮಾತನ್ನು ಪಾಲಿಸುತ್ತಿದ್ದರು. ಸದ್ಯ ಇಂದು ಬೆಳಗ್ಗೆ ದರ್ಶನ್ ಬೆಂಗಳೂರಿಗೆ ಆಗಮಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *