ಬೀದರ್‌ನಲ್ಲಿ ಫಿಲ್ಮಿ ಸ್ಟೈಲ್‌ ಎಟಿಎಂ ಹಣ ದರೋಡೆ – ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದ ಸಿಬ್ಬಂದಿ

Public TV
1 Min Read

ಬೀದರ್‌: ಹಾಡಗಲೇ ಬೀದರ್‌ನಲ್ಲಿ (Bidar) ಫಿಲ್ಮ್‌ ಸ್ಟೈಲ್‌ ದರೋಡೆ ನಡೆದಿದ್ದು ಜನತೆ ಬೆಚ್ಚಿ ಬಿದ್ದಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ ಹಣದೊಂದಿಗೆ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ.

ಬೆಳಗಿನ ಜಾವ 10:55 ರಿಂದ 11 ಗಂಟೆಯ ಅವಧಿಯ ಒಳಗಡೆ ಈ ಕೃತ್ಯ ನಡೆದಿದೆ. ಸಿಎಂಎಸ್‌ ಸಂಸ್ಥೆ ಎಸ್‌ಬಿಐ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಾಗ ದರೋಡೆ ನಡೆದಿದೆ.

ಈ ದರೋಡೆ ಹಿಂದೆ ಭಾರೀ ಅನುಮಾನ ವ್ಯಕ್ತವಾಗಿದೆ. ಯಾವುದೇ ಎಟಿಎಂನಲ್ಲಿ (ATM) ಹಣ ತುಂಬುವಾಗ ಗನ್‌ಮ್ಯಾನ್‌ ಕಡ್ಡಾಯವಾಗಿ ಇರಲೇಬೇಕು. ಆದರೆ ಇಲ್ಲಿ ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದಾರೆ.

ಪಬ್ಲಿಕ್‌ ಟಿವಿ ಜೊತೆ ಚಾಲಕ ರಾಜಶೇಖರ್‌ ಮಾತನಾಡಿ, ನಾವು ಮೂವರು ಸ್ಥಳಕ್ಕೆ ಬಂದಿದ್ದೆವು. ಬಾಕ್ಸ್‌ ಒಳಗಡೆ ಎಷ್ಟು ಹಣ ಇತ್ತು ಎನ್ನುವುದು ಗೊತ್ತಿಲ್ಲ. ಒಂದೇ ಬಾಕ್ಸ್‌ ಇತ್ತು. ನಾವು ಪ್ರತಿ ದಿನ ಇಲ್ಲಿಯೇ ಎಲ್ಲರೂ ಸೇರಿ ಹಣವನ್ನು ಎಟಿಎಂಗೆ ತುಂಬುತ್ತೇವೆ ಎಂದು ತಿಳಿಸಿದರು.

ಈ ವೇಳೆ ಗನ್‌ಮ್ಯಾನ್‌ ಎಲ್ಲಿದ್ದರು ಎಂಬ ಪ್ರಶ್ನೆಗೆ, ಈ ಕೃತ್ಯ ನಡೆಯುವ ಗನ್‌ಮ್ಯಾನ್‌ ಇರಲಿಲ್ಲ. ಗನ್‌ಮ್ಯಾನ್‌ 1 ಗಂಟೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದರು. ಖಾರದ ಪುಡಿ ಎರಚಿದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದರು.

ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಗುಂಡಿನ ದಾಳಿಗೆ ಬಲಿಯಾದ ಗಿರಿ ವೆಂಕಟೇಶ ಮೃತದೇಹವನ್ನು ಬ್ರಿಮ್ಸ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article