ಭೂಮಿ ಮೇಲೆ ಇಲ್ಲದಂತೆ ಮಾಡ್ತೀನಿ ಅಂತಾ ದರ್ಶನ್‌ ಬೆದರಿಸಿದ್ದರು: ನಿರ್ಮಾಪಕ

Public TV
1 Min Read

ಬೆಂಗಳೂರು: ನಟ ದರ್ಶನ್‌ (Actor Darshan) ಅಭಿಮಾನಿಗಳಿಂದ ನನಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಆರೋಪಿಸಿ ಸಿನಿಮಾ ನಿರ್ಮಾಪಕ ಭರತ್‌ ಪೊಲೀಸ್‌ ಠಾಣೆಗೆ ಮತ್ತೆ ದೂರು ನೀಡಿದ್ದಾರೆ.

ದೂರಿನ ಕುರಿತು ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ ಅವರು, ನಾನು ‘ಭಗವಾನ್‌ ಶ್ರೀಕೃಷ್ಣ’ ಸಿನಿಮಾ (2022) ಮಾಡುತ್ತಿದ್ದೆ. ಸಿನಿಮಾದ ನಿರ್ಮಾಪಕ ನಾನು. ಶೆಡ್ಯೂಲ್‌ ಮುಗಿದ ಮೇಲೆ ನಾವು ಒಂದು ಬ್ರೇಕ್‌ ತೆಗೆದುಕೊಂಡಿದ್ದೆವು. ಸ್ಕ್ರಿಪ್ಟ್‌ ರೆಡಿ ಇರಲಿಲ್ಲ. ಹೀಗಾಗಿ ಬ್ರೇಕ್‌ ತೆಗೆದುಕೊಂಡಿದ್ದೆವು. ಆಗ ದರ್ಶನ್‌ ಅವರು ನನಗೆ ಸಿನಿಮಾ ಮಾಡುವಂತೆ ಒತ್ತಡ ಹಾಕುತ್ತಾರೆ. ಸಿನಿಮಾ ಮಾಡದಿದ್ದರೆ ನೀನು ಭೂಮಿ ಮೇಲೆ ಇಲ್ಲದಂತೆ ಮಾಡುತ್ತೇವೆ ಎಂದು ಬೆದರಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚರಂಡಿಗೆ ಬೇಡ, ಸ್ವಾಮಿ ಮನೆಯವರಿಗಾದ್ರೂ ಶವ ಸಿಕ್ಕಲಿ ಎಂದಿದ್ದ ಆರೋಪಿ ಕಾರ್ತಿಕ್!

ನಮ್ಮ ಸಿನಿಮಾದ ಹೀರೋ ಫೋನ್‌ ಥ್ರೂ ಕಾನ್ಫರೆನ್ಸ್‌ ತೆಗೆದುಕೊಂಡು ದರ್ಶನ್‌ ಸರ್‌ ಮಾತನಾಡಿದ್ದರು. ನನಗೆ ಬೆದರಿಕೆ ಹಾಕಿದ್ದರು. ಮತ್ತೆ ನನ್ನನ್ನು ಫ್ಯಾಕ್ಟರಿಯೊಂದಕ್ಕೆ ಕರೆಸಿಕೊಂಡು ಎನ್‌ಒಸಿಗೆ ಸಹಿ ಹಾಕು ಅಂತಾ ಒತ್ತಡ ಹಾಕಿದ್ದರು. ಅದಕ್ಕೆ ನಾನು, ನನ್ನ ಅಮೌಂಟ್‌ ಸೆಟಲ್‌ಮೆಂಟ್‌ ಮಾಡಿ ನಂತರ ಸಹಿ ಹಾಕುತ್ತೇನೆ ಎಂದಿದ್ದೆ. ನನಗೆ ಹಲ್ಲೆ ಮಾಡಿರಲಿಲ್ಲ. ಆದರೆ ಸಂದರ್ಭ ಹಾಗಿತ್ತು. ನನ್ನ ಜೊತೆ ಕೆಲ ಸ್ನೇಹಿತರು ಕೂಡ ಬಂದಿದ್ದರು. ಹಾಗಾಗಿ ನಾನು ಬಚಾವ್‌ ಆಗಿ ಬಂದೆ. ಇಲ್ಲದೇ ಇದ್ದಿದ್ರೆ ಅವತ್ತು ನನಗೂ ಏನು ಮಾಡ್ತಿದ್ರೋ ಗೊತ್ತಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

ಬೆದರಿಕೆ ಪ್ರಕರಣದಲ್ಲಿ ಮುಂಚೆ ದರ್ಶನ್‌ ಅವರನ್ನು ಕರೆಸಿ ಪೊಲೀಸರು ತನಿಖೆ ಮಾಡಿರಲಿಲ್ಲ. ಆಮೇಲೆ ನಾನು ಸುಮ್ಮನೆ ಆಗಿದ್ದೆ. ಈಗ ಕೊಲೆ ಪ್ರಕರಣ ಬೆಳಕಿಗೆ ಬಂದ್ಮೇಲೆ, ನನ್ನ ಹಳೆ ಆಡಿಯೋ ವೈರಲ್‌ ಆಗುತ್ತಿದೆ. ಅದಕ್ಕೆ ಅವರ ಅಭಿಮಾನಿಗಳು ಬೆದರಿಕೆ ಸಂದೇಶ ಕಳಿಸುತ್ತಿದ್ದಾರೆ. ಆದ್ದರಿಂದ ನಾನು ರಕ್ಷಣೆ ಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಡೀಲ್‌ ಮಾಡಲಾಗಿದ್ದ 30 ಲಕ್ಷ ಹಣ ಸೀಜ್‌

Share This Article