ಸಿನಿಮಾ ಇಂಡಸ್ಟ್ರಿ ಜೊತೆಗೆ ಚಿತ್ರಮಂದಿರ ಬಂದ್ ಮಾಡುವುದಿಲ್ಲ: ಫಿಲ್ಮ್‌ ಚೇಂಬರ್ ಅಧ್ಯಕ್ಷ ಸ್ಪಷ್ಟನೆ

Public TV
2 Min Read

ತೆಲಂಗಾಣದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡಲಾಗಿದೆ. ಕ್ರಿಕೆಟ್, ಎಲೆಕ್ಷನ್ ಸ್ಟಾರ್ ಸಿನಿಮಾಗಳ ಕೊರತೆ ಇನ್ನಿತರೆ ಕಾರಣಗಳಿಂದ ಚಿತ್ರಮಂದಿರಗಳಿಗೆ ಜನ ಬರುವುದು ಕಮ್ಮಿಯಾಗಿದೆ. ಇದರಿಂದ ಚಿತ್ರಮಂದಿರಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಹಾಗಾಗಿ ತೆಲಂಗಾಣದಂತೆ ಕರ್ನಾಟಕದಲ್ಲಿಯೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಬೇಕು ಎಂಬ ಚರ್ಚೆ ಜೋರಾಗಿತ್ತು. ಈ ವಿಚಾರವಾಗಿ ಚಿತ್ರರಂಗದ ಪ್ರಮುಖರ ಸಭೆ ನಡೆದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ ಸುರೇಶ್‌ (N.M Suresh) ಚಿತ್ರಮಂದಿರ ಬಂದ್‌ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮತ್ತೆ ಡೈರೆಕ್ಟರ್‌ ಶಶಾಂಕ್‌ ಜೊತೆ ಕೈಜೋಡಿಸಿದ ಡಾರ್ಲಿಂಗ್ ಕೃಷ್ಣ

ಕನ್ನಡ ಚಿತ್ರರಂಗ ಹಾಗೂ ಚಿತ್ರಮಂದಿರ ಬಂದ್ ಮಾಡುವುದಿಲ್ಲ ಎಂದು ಎನ್.ಎಂ ಸುರೇಶ್ ಮಾತನಾಡಿದ್ದರು. ಚಿತ್ರಮಂದಿರಗಳ ಸಮಸ್ಯೆ ಹಾಗೂ ಚಿತ್ರರಂಗದ ಸಮಸ್ಯೆ ಬಗ್ಗೆ ಕುಲಂಕುಶವಾಗಿ ಚರ್ಚೆ ನಡೆಯಿತು. ಹಲವು ನಿರ್ಮಾಪಕರು ಸಭೆಯಲ್ಲಿ ಭಾಗಿಯಾಗಿದ್ದರು. ಚಿತ್ರಮಂದಿರಗಳನ್ನು ಬಂದ್ ಮಾಡುತ್ತೀವಿ ಎಂದು ಈ ಹಿಂದೆಯೂ ನಾವು ಹೇಳಿರಲಿಲ್ಲ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದೆವು, ಪ್ರದರ್ಶಕರನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನುವ ಬಗ್ಗೆ ಚರ್ಚೆಯಾಯಿತು. ಈ ವಿಷಯದ ಬಗ್ಗೆ ಸರ್ಕಾರದ ಜೊತೆ ಚರ್ಚೆ ಮಾಡ್ತಿವಿ ಎಂದು ತಿಳಿಸಿದ್ದಾರೆ. ಬಂದ್ ಅಂತ ಅನೌನ್ಸ್ ಮಾಡದೇ ಇದ್ದರು. ಆ ಸುದ್ದಿ ಹರಿದಾಡಿರೋದಕ್ಕೆ ಚಿತ್ರರಂಗದ ವ್ಯವಹಾರಕ್ಕೆ ತೊಂದರೆ ಆಗಿದೆ. ಓಟಿಟಿ ರೈಟ್ಸ್‌ಗೆ ಜೊತೆಗೆ ಬೇರೆ ಭಾಷೆಗಳಲ್ಲಿ ಸಿನಿಮಾಗಳ ಮಾರ್ಕೆಟ್‌ಗೆ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು. ಈ ಎಲ್ಲಾ ವಿಚಾರವನ್ನು ಸರ್ಕಾರದ ಗಮನಕ್ಕೆ ತರೋದಾಗಿ ಎನ್‌.ಎಂ ಸುರೇಶ್‌ ತಿಳಿಸಿದ್ದಾರೆ.

ಸಿಜಿ ವರ್ಕ್, ಪೋಸ್ಟ್ ಪ್ರೋಡಕ್ಷನ್‌ನಿಂದ ಸಿನಿಮಾಗಳು ಲೇಟ್ ಆಗೋದಕ್ಕೆ ತೊಂದರೆ ಆಗುತ್ತಿದೆ. ಹೀಗಾಗಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್‌ಗೆ ಲೇಟ್ ಆಗುತ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಕೇರಳ ರಾಜ್ಯದಲ್ಲಿ ಮಾಡಿರುವ ರೀತಿ ನಮ್ಮಲ್ಲಿ ಅಭಿವೃದ್ಧಿ ಮಾಡುತ್ತೇವೆ. ಇದೀಗ ಕೇರಳ ಸರ್ಕಾರ ಅವರದ್ದೇ ಓಟಿಟಿ ಮಾಡಿದೆ. ಯುಎಫ್ ಓ, ಕ್ಯೂಬ್ ಅವರದ್ದೇ ಇದೇ ಕಡಿಮೆ ಬೆಲೆಗೆ ಪ್ರೊಸೆಸ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಇದೇ ರೀತಿ ವ್ಯವಸ್ಥೆ ಆಗುವ ಹಾಗೇ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಎನ್.ಎಂ ಸುರೇಶ್ ಮಾತನಾಡಿದ್ದಾರೆ.

ಅಂದಹಾಗೆ, ಈ ಸಭೆಯಲ್ಲಿ ಫಿಲ್ಮ್‌ ಚೇಂಬರ್ (Film Chamber) ಅಧ್ಯಕ್ಷ ಎನ್.ಎಮ್ ಸುರೇಶ್ ನೇತೃತ್ವದಲ್ಲಿ ನಡೆದಿದೆ. ಈ ವೇಳೆ, ಚಿತ್ರರಂಗದ ಸದ್ಯದ ಆ್ಯಕ್ಟೀವ್ ನಿರ್ಮಾಪಕರು, ಹಿರಿಯ ನಿರ್ಮಾಪಕರನ್ನು ಸಭೆಗೆ ಕರೆಯಲಾಗಿತ್ತು. ಈ ಮಾತುಕತೆಯಲ್ಲಿ ವಿತರಕ ಜಯಣ್ಣ, ನಿರ್ಮಾಪಕ, ನಿರ್ದೇಶಕ ಆರ್ ಚಂದ್ರು, ಕೆ ಮಂಜು, ಹೊಂಬಾಳೆ ನಿರ್ಮಾಣ ಸಂಸ್ಥೆಯ ಪ್ರತಿನಿಧಿ ಚಿದಾನಂದ್, ಲಹರಿ ವೇಲು, ಕೆಪಿ ಶ್ರೀಕಾಂತ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Share This Article