ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು

Public TV
2 Min Read

ಭಾರತ ಕ್ರಿಕೆಟ್ ತಂಡ 2ನೇ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ರೋಹಿತ್ ಶರ್ಮಾ ನೇತೃತ್ವದ ತಂಡ ಗೆದ್ದು ಬೀಗಿದೆ. ಹೀಗಿರುವಾಗ ವಿಶ್ವಕಪ್ (World Cup 2024) ಭಾರತ ಕ್ರಿಕೆಟ್ ತಂಡದ ಸಾಧನೆಗೆ ಸಿನಿತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

ರೋಹಿತ್ ಶರ್ಮಾ ತಂಡವನ್ನು ಯಶ್‌ ಕೊಂಡಾಡಿದ್ದಾರೆ. ಇತಿಹಾಸದಲ್ಲಿ ಕೆತ್ತಿದ ಗೆಲುವು. ಟಿ20 ವಿಶ್ವಕಪ್ 2024 ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ‘ಜೈ ಹಿಂದ್’ ಎಂದು ನ್ಯಾಷನಲ್ ಸ್ಟಾರ್ ಯಶ್ (Yash) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಭಾರತ ತಂಡದ ಸಾಧನೆ ಬಗ್ಗೆ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಪ್ರತಿಕ್ರಿಯಿಸಿದ್ದಾರೆ. ಈಗ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದೆ. ಅಭಿನಂದನೆಗಳು ಟೀಂ ಇಂಡಿಯಾ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದಾರೆ. ಇದನ್ನೂ ಓದಿ:ಜನಪ್ರಿಯ ವಾಹಿನಿಯಲ್ಲಿ ಧಾರಾವಾಹಿ ಆಯ್ತು ರೇಣುಕಾಸ್ವಾಮಿ ಮರ್ಡರ್

 

View this post on Instagram

 

A post shared by Vinay Gowda (@vinaygowdaactor)


ರಾಹುಲ್ ದ್ರಾವಿಡ್ ಅವರಿಗೆ ಅದ್ಭುತವಾಗಿ ವಿದಾಯ ಹೇಳಲಾಗಿದೆ. ಬಹಳ ಬಹಳ ಬಹಳ ಹೆಮ್ಮೆಯಾಗುತ್ತಿದೆ ಸರ್, ಘನತೆಯ ಶಿಖರ ಇದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರುಗಳು ನಮ್ಮ ಹೀರೋಗಳಾಗಿ ಹೊರಹೊಮ್ಮಿದ್ದಕ್ಕೆ ಧನ್ಯವಾದ ಹಾಗೂ ಆ ಕೊನೆಯ ಓವರ್‌ನಲ್ಲಿ ಅದ್ಭುತ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್‌ಗೆ ವಿಶೇಷ ಧನ್ಯವಾದ ಎಂದಿದ್ದಾರೆ ಕಿಚ್ಚ ಸುದೀಪ್. ಅದಷ್ಟೇ ಅಲ್ಲ, ತಮ್ಮ ನಿವಾಸದಲ್ಲಿ ಆಪ್ತರಾದ ಚಕ್ರವರ್ತಿ ಚಂದ್ರಚೂಡ್, ವಿನಯ್ ಗೌಡ, ನಟ ಪ್ರದೀಪ್ ಜೊತೆ ಪಂದ್ಯ ವೀಕ್ಷಿಸಿ ಸುದೀಪ್ (Sudeep) ಸಂಭ್ರಮಿಸಿದ್ದಾರೆ.

 

View this post on Instagram

 

A post shared by DrShivaRajkumar (@nimmashivarajkumar)

ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, ಗೋಡೆ ಮೇಲೆ ವರ್ಲ್ಡ್ ಕಪ್ ಇಡೋರ್ ಆಗಬೇಕು ಎಂದು ನಟ ಶಿವರಾಜ್‌ಕುಮಾರ್ ಪೋಸ್ಟ್ ಮಾಡಿ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ. ಅದಷ್ಟೇ ಅಲ್ಲ, ಐತಿಹಾಸಿಕ ವಿಜಯ ಎಂದು ರಿಷಬ್ ಶೆಟ್ಟಿ (Rishab Shetty) ಕೂಡ ಸಂಭ್ರಮಿಸಿದ್ದಾರೆ.

ಇದು ನಮ್ಮದು, ನೀಲಿ ಉಡುಪು ತೊಟ್ಟ ನಮ್ಮ ಹೀರೋಗಳು ಇನ್ನು ಮುಂದೆ ವಿಶ್ವ ವಿಜೇತರು ಎಂದು ಕರೆಸಿಕೊಳ್ಳುತ್ತಾರೆ. ಆಟದ ಮೈದಾನದಲ್ಲಿ ನೀವು ತೋರಿದ ಛಾತಿಗೆ ತಲೆ ಬಾಗಿ ವಂದಿಸುತ್ತೇವೆ. ಸೂರ್ಯಕುಮಾರ್ ಯಾದವ್ ನೀವು ಹಿಡಿದ ಕ್ಯಾಚ್ ಕ್ರಿಕೆಟ್ ಇತಿಹಾಸವನ್ನು ಸೇರಿ ಆಗಿದೆ. ಈ ಐತಿಹಾಸಿಕ ಜಯದ ಬಗ್ಗೆ ಹೆಮ್ಮೆಯಿದೆ ಎಂದು ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅಭಿನಂದಿಸಿದ್ದಾರೆ.

Share This Article