ಅಶ್ಲೀಲ ವಿಡಿಯೋ ಪ್ರಕರಣವನ್ನು ಸಿನಿಮಾ ಮಾಡಲಿದ್ದಾರೆ ಶಿಲ್ಪಾ ಶೆಟ್ಟಿ ಪತಿ

Public TV
2 Min Read

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ತಮ್ಮ ಜೀವನ ಚರಿತ್ರೆಯನ್ನ ಸಿನಿಮಾ ಮಾಡಲು ಮುಂದಾಗಿದ್ದಾರೆ.  ಅಶ್ಲೀಲ ವಿಡೀಯೋ ನಿರ್ಮಾಣದ ವಿಚಾರವಾಗಿ 2021ರಲ್ಲಿ ರಾಜ್‌ ಕುಂದ್ರಾ ಜೈಲಿಗೆ ಸೇರಿದ್ದರು. ಈ ವಿಚಾರ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಮಾತಿದೆ. ಆದರೆ ಈ ಸಿನಿಮಾ ಮಂದಿ, ಹೋದ ಮಾನವನ್ನ ಸಿನಿಮಾ ಮಾಡುವ ಮೂಲಕ ಮರ್ಯಾದೆ ಉಳಿಸುವ ಪ್ರಯತ್ನ ಮಾಡ್ತಿದ್ದಾರೆ. ರಾಜ್ ಕುಂದ್ರಾ ಅವರು ತಮ್ಮ ಜೀವನವನ್ನ ಸಿನಿಮಾ ಮೂಲಕ ತೋರಿಸಲು ಹೊರಟ್ಟಿದ್ದಾರೆ.

ಈ ಹಿಂದೆ ಸಂಜಯ್ ದತ್ (Sanjay Dutt) ಅವರು ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದಾರೆ ಎಂದು ಜೈಲು ಪಾಲಾಗಿದ್ದರು. ಬಳಿಕ ತಮ್ಮ ಜೀವನದ ಕಥೆಯನ್ನ ಸಂಜು ಸಿನಿಮಾದ ಮೂಲಕ ಅಭಿಮಾನಿಗಳಿಗೆ ತೋರಿಸಿದ್ದರು. ಸಂಜು ಆಗಿ ರಣ್‌ಬೀರ್ ಕಪೂರ್ ನಟಿಸಿದ್ದರು. ಈ ವರ್ಷದ ನರೇಶ್- ಪವಿತ್ರಾ ಲೋಕೇಶ್ ಅವರ ಪ್ರೇಮ ಪ್ರಕರಣ ಸೌತ್- ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿತ್ತು. ನರೇಶ್ ಪತ್ನಿ ರಮ್ಯಾ ರಘುಪತಿ ಅವರು ಪವಿತ್ರಾ- ನರೇಶ್ ವಿರುದ್ಧ ಧ್ವನಿಯೆತ್ತಿದ್ದರು. ಇದನ್ನೇ ‘ಮತ್ತೆ ಮದುವೆ’ (Matte Maduve) ಎಂದು ತೆಲುಗಿನ ನಟ ನರೇಶ್ (Actor Naresh) ಸಿನಿಮಾ ಮಾಡಿದ್ರು. ತಮ್ಮ ಕಥೆಯನ್ನೇ ಬೆಳ್ಳಿಪರದೆಯಲ್ಲಿ ನರೇಶ್‌ ಸಿನಿಮಾ ಮಾಡಿ ತೋರಿಸಿದ್ದರು. ಇದೀಗ ಅವರ ಹಾದಿಯನ್ನೇ ರಾಜ್ ಕುಂದ್ರಾ ಅನುಸರಿಸುತ್ತಿದ್ದಾರೆ. ಅವರದ್ದೇ ಕಥೆಯನ್ನ ನಿರ್ಮಾಣ ಮಾಡಲು ಹೊರಟಿದ್ದಾರೆ. ಇದನ್ನೂ ಓದಿ:ಶಿವನ ಧ್ಯಾನದಲ್ಲಿ ಮುಳುಗಿದ ಸಮಂತಾ

ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ 2021ರಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಅದೂ ಸಾಮಾನ್ಯ ಪ್ರಕರಣದಲ್ಲಲ್ಲ, ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ. ತನಿಖೆ ನಡೆಸಿದ್ದ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದರು. ಕೆಲವು ನಟಿಯರು ಬಹಿರಂಗವಾಗಿ ಕುಂದ್ರಾ ವಿರುದ್ಧ ಆರೋಪಗಳನ್ನೂ ಮಾಡಿದರು. ಇನ್ನು ಕೆಲವರು ತನಿಖಾಧಿಕಾರಿಗಳ ಬಳಿಕ ಹೇಳಿಕೆ ನೀಡಿದ್ದರು. 63 ದಿನಗಳ ಬಳಿಕ ಜಾಮೀನಿನ ಮೇಲೆ ಕುಂದ್ರಾ ಜೈಲಿನಿಂದ ಹೊರಬಂದರು. ಪ್ರಕರಣ ಈಗಲೂ ವಿಚಾರಣೆ ಹಂತದಲ್ಲಿದೆ.

ರಾಜ್ ಕುಂದ್ರಾ (Raj Kundra) ಅವರು ಜೈಲಿನಲ್ಲಿ ಎದುರಿಸಿದ ಸಂದರ್ಭ, ಶಿಲ್ಪಾ ಶೆಟ್ಟಿ (Shilpa Shetty) ಅವರ ಮನಸ್ಥಿತಿ ಈ ಎಲ್ಲದನ್ನೂ ಸಿನಿಮಾ ಮೂಲಕ ರಾಜ್ ಕುಂದ್ರಾ ಅವರು ತೋರಿಸುವ ಯೋಚನೆಯಲ್ಲಿದ್ದಾರೆ. ಈ ಸಿನಿಮಾಗೆ ಹೀರೋ- ಹೀರೋಯಿನ್ ಪಾತ್ರ ವರ್ಗದ ಬಗ್ಗೆ ಯಾವುದು ಇನ್ನೂ ರಿವೀಲ್ ಆಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್