ಆಗಸ್ಟ್ 25ಕ್ಕೆ ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಚಿತ್ರದ ಬಿಗ್ ಅಪ್‌ಡೇಟ್

Public TV
1 Min Read

ಸ್ಯಾಂಡಲ್‌ವುಡ್‌ನ (Sandalwood) ಮರಿ ಟೈಗರ್ ವಿನೋದ್ ಪ್ರಭಾಕರ್ ‘ಫೈಟರ್’ (Fighter) ಅವತಾರ ತಾಳಿದ್ದಾರೆ. ಹೊಸ ಬಗೆಯ ಗೆಟಪ್‌ನಲ್ಲಿ ಮಿಂಚಲು ವಿನೋದ್ ಪ್ರಭಾಕರ್ (Vinod Prabhakar) ರೆಡಿಯಾಗಿದ್ದಾರೆ. ಇದೀಗ ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಫೈಟರ್ ಸಿನಿಮಾ ಮೊದಲ ಝಲಕ್ ರಿವೀಲ್ ಟೀಮ್ ನಿರ್ಧರಿಸಿದೆ.

ನೂತನ್ ಉಮೇಶ್ ನಿರ್ದೇಶನದ ‘ಫೈಟರ್’ ಸಿನಿಮಾ ಬಗ್ಗೆ ಆಗಸ್ಟ್ 25ಕ್ಕೆ ಬಿಗ್ ಅಪ್‌ಡೇಟ್ ಕೊಡೋದಾಗಿ ಚಿತ್ರತಂಡ ತಿಳಿಸಿದೆ. ನಾಳೆ ಶುಕ್ರವಾರದಂದು ಫೈಟರ್ ಸಿನಿಮಾ ಖಡಕ್ ಟೀಸರ್‌ವೊಂದು ರಿವೀಲ್ ಆಗಿದೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಟೀಸರ್ ಝಲಕ್ ಮೂಲಕ ಫ್ಯಾನ್ಸ್‌ಗೆ ದರ್ಶನ ಕೊಡಲಿದ್ದಾರೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್

ವರ್ಷಕ್ಕೆ ಒಂದೇ ಸಿನಿಮಾ ಮಾಡಿದ್ರು ಕಥೆ ಭಿನ್ನವಾಗಿರಬೇಕು ಎನ್ನುವ ನಿಲುವು ವಿನೋದ್ ಪ್ರಭಾಕರ್ ಅವರದ್ದು. ಎಂದೂ ಕಾಣಿಸಿಕೊಂಡಿರದ ಭಿನ್ನ ಪಾತ್ರದಲ್ಲಿ ವಿನೋದ್ ನಟಿಸಿದ್ದಾರೆ. ‘ಫೈಟರ್’ ಸಿನಿಮಾವನ್ನು ಸೋಮಶೇಖರ್ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

‘ಫೈಟರ್’ ಒಂದು ಪಕ್ಕಾ ಫ್ಯಾಮಿಲಿ, ಕಮರ್ಷಿಯಲ್ ಚಿತ್ರವಾಗಿದ್ದು, ಚಿತ್ರದ ನಾಯಕನ ರೈಟರ್, ಫೈಟರ್ ಮತ್ತು ಶೂಟರ್ ಎಂಬ ಮೂರು ವಿಭಿನ್ನ ಛಾಯೆಗಳಲ್ಲಿ ಕಾಣಿಸಿಕೊಂಡು ಸಾಮಾಜಿಕ ಕಳಕಳಿಯಿಂದ ಹೊರಡುತ್ತಾನೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ನಾವು ನಿಜ ಜೀವನದಲ್ಲಿ ಹಲವು ವಿಷಯಗಳಿಗೆ ಫೈಟ್ ಮಾಡುತ್ತೇವೆ. ಅದು ತುಂಬಾ ಸಹಜವಾಗಿ ಈ ಚಿತ್ರದಲ್ಲಿ ಮೂಡಿ ಬರಲಿದೆ. ಇದರಲ್ಲಿ ಮಾರ್ಷಲ್ ಆರ್ಟ್ ಇದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್