ಮಿಗ್-21 ಯುದ್ಧ ವಿಮಾನದ 62 ವರ್ಷಗಳ ಸೇವೆಗೆ ವಿದಾಯ – ಸೆ. 19ರಂದು ಬೀಳ್ಕೊಡುಗೆ ಸಮಾರಂಭ

Public TV
1 Min Read

ನವದೆಹಲಿ: ಭಾರತೀಯ ವಾಯುಸೇನೆಯ ಐತಿಹಾಸಿಕ ಯುದ್ಧ ವಿಮಾನ ಮಿಗ್-21, 62 ವರ್ಷಗಳ ತನ್ನ ಶೌರ್ಯದ ಸೇವೆಯನ್ನು ಮುಗಿಸಲಿದೆ. ಸೆಪ್ಟೆಂಬರ್ 19ರಂದು ಕೊನೆಯ ಜೆಟ್‌ಗೆ ಚಂಡೀಗಢ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್ (ಪ್ಯಾಂಥರ್ಸ್) ಔಪಚಾರಿಕ ಬೀಳ್ಕೊಡುಗೆ ನೀಡಲಿದೆ.

ಸೋವಿಯತ್ ನಿರ್ಮಿತ ಈ ವಿಮಾನವು 1963ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಯಾಯಿತು. ಬಳಿಕ ದೇಶದ ವೈಮಾನಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. 1965 ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧಗಳು, 1999ರ ಕಾರ್ಗಿಲ್ ಯುದ್ಧ, 2019ರ ಬಾಲಕೋಟ್ ದಾಳಿಗಳು ಮತ್ತು ಆಪರೇಷನ್ ಸಿಂಧೂರದಲ್ಲಿ ಪ್ರಮುಖ ಪಾತ್ರವಹಿಸಿದೆ. ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

ಸಾಕಷ್ಟು ಸಾಧನೆಯ ನಡುವೆಯೂ ಇತ್ತೀಚಿನ ವರ್ಷಗಳಲ್ಲಿ ಈ ವಿಮಾನವು ಆಗಾಗ ಅಪಘಾತಕ್ಕೀಡಾಗಿತ್ತು. 400ಕ್ಕೂ ಹೆಚ್ಚು ಅಪಘಾತಗಳು ಮತ್ತು ಗಮನಾರ್ಹ ಪೈಲಟ್ ಸಾವು-ನೋವುಗಳು ಇದರಲ್ಲಿ ಸಂಭವಿಸಿವೆ. ಹೀಗಾಗಿ ಇದಕ್ಕೆ `ಹಾರುವ ಶವಪೆಟ್ಟಿಗೆ’ ಎಂದು ಕರೆಯಲಾಗುತ್ತಿತ್ತು. ಇದನ್ನೂ ಓದಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

ತಾಂತ್ರಿಕವಾಗಿ ಹಳೆಯದಾದ ಮಿಗ್-21 ವಿಮಾನಗಳು ಆಧುನಿಕ ಯುದ್ಧದ ಅಗತ್ಯಗಳಿಗೆ ಸರಿ ಹೊಂದಿರುವುದರಿಂದ, ಭಾರತೀಯ ವಾಯುಸೇನೆಯು ತೇಜಸ್ ಮತ್ತು ರಫೇಲ್‌ನಂತಹ ಆಧುನಿಕ ಯುದ್ಧ ವಿಮಾನಗಳನ್ನು ಸೇರಿಸಿಕೊಳ್ಳುತ್ತಿದೆ.

ಭಾರತೀಯ ವಾಯುಸೇನೆಯು ತೇಜಸ್ ಎಂಕೆ-1ಎ, ರಫೇಲ್, ಮತ್ತು ಸುಖೋಯ್ ಸು-30 ಎಂಕೆಐ ವಿಮಾನಗಳೊಂದಿಗೆ ತನ್ನ ಶಕ್ತಿಯನ್ನು ಬಲಪಡಿಸುತ್ತಿದೆ. ಇದರ ಜೊತೆಗೆ, ಸ್ವದೇಶಿ ಎಎಂಸಿಎ (ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್) ಯೋಜನೆಯು ಭವಿಷ್ಯದ ಯುದ್ಧ ವಿಮಾನಗಳಿಗೆ ದಾರಿ ಮಾಡಿಕೊಡಲಿದೆ.

Share This Article