ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಭಾವುಕತೆ, ಫನ್ ಮತ್ತು ಪ್ರೇಮಿಗಳ ಕಲರವ ಕೇಳಿ ಬರುತ್ತಿತ್ತು. ತ್ರಿಕೋನ ಪ್ರೇಮಕಥೆಗಳು ಕೂಡ ಹುಟ್ಟಿಕೊಂಡವು. ಆರ್ಯವರ್ಧನ್ ಗುರೂಜಿ ಏರು ಧ್ವನಿಯಲ್ಲಿ ಒಂದು ಬಾರಿ ಮಾತನಾಡಿದ್ದನ್ನು ಬಿಟ್ಟರೆ, ಉಳಿದಂತೆ ಮನೆ ಫುಲ್ ಸೈಲೆಂಟ್. ಆದರೆ, ಎರಡನೇ ವಾರ ಹಾಗಿಲ್ಲ. ಮನೆಯ ಇಡೀ ವಾತಾವರಣೇ ಬದಲಾಗಿದೆ. ಅದರಲ್ಲೂ ಸಣ್ಣ ಪುಟ್ಟ ವಿಷಯಗಳನ್ನಿಟ್ಟುಕೊಂಡು ಹಗೆ ಸಾಧಿಸುವಂತಹ ಮನಸ್ಥಿತಿ ಉಂಟಾಗಿದೆ.
ಸೋಮವಾರ ಮನೆಯ ಎಲ್ಲ ಸದಸ್ಯರು ಸ್ವಾತಂತ್ರ್ಯ ಧ್ವಜಾ ರೋಹನದಲ್ಲಿ ಪಾಲ್ಗೊಂಡಿದ್ದರು. ನಂತರ ಒಂದಷ್ಟು ಹೊತ್ತು ಸಂಭ್ರಮದಿಂದಲೇ ಕಳೆದರು. ನಗು ನಗುತ್ತಲೇ ಇದ್ದ ಮನೆಯು ರೊಟ್ಟಿ ವಿಚಾರವಾಗಿ ರಣರಂಗವಾಗಿ ಮಾರ್ಪಟ್ಟಿತು ಆ ಮನೆ. ರೂಪೇಶ್ ತನಗೆ ಕೊಟ್ಟಿದ್ದ ರೊಟ್ಟ ಹೆಚ್ಚಾಯಿತು ಎಂದು ಅದನ್ನು ಡಸ್ಟ್ ಬೀನ್ ಗೆ ಎಸೆದಿದ್ದರು. ಅದನ್ನು ಕಂಡ ಅರ್ಜುನ್, ಯಾರು ರೊಟ್ಟಿ ಎಸೆದದ್ದು ಎಂದು ಕೇಳಿದರು. ಇಬ್ಬರ ನಡುವಿನ ಸಂಭಾಷಣೆಯೇ ಜಗಳಕ್ಕೆ ಕಾರಣವಾಯಿತು. ಇದನ್ನೂ ಓದಿ:ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಯ್ತು ‘ಸಲಾರ್’ ಚಿತ್ರದ ಪೋಸ್ಟರ್
ಡಸ್ಟ್ ಬೀನ್ ಗೆ ನಾನೇ ರೊಟ್ಟಿ ಎಸೆದದ್ದು ಅಂತ ರೂಪೇಶ್ ಒಪ್ಪಿಕೊಂಡ. ನನಗೆ ರೊಟ್ಟಿ ಹಿಡಿಸಲಿಲ್ಲ ಎಂದೂ ಹೇಳಿದ. ಈ ಉತ್ತರದಿಂದ ಸಮಾಧಾನವಾಗದ ಅರ್ಜುನ್, ಎಷ್ಟೋ ಜನಕ್ಕೆ ತಿನ್ನಲು ಅನ್ನವಿಲ್ಲ. ಉಪವಾಸದಿಂದ ಸಾಯುತ್ತಿದ್ದಾರೆ ಎಂದು ರೇಗಿದೆ. ಈ ಮಾತು ರೂಪೇಶ್ ಗೆ ಸರಿ ಕಾಣಲಿಲ್ಲ. ಹಾಗಾಗಿ ಇಬ್ಬರೂ ಏರು ಧ್ವನಿಯಲ್ಲೇ ಪರಸ್ಪರ ಮಾತಿನ ಯುದ್ಧವನ್ನೇ ಸಾರಿದರು. ಇಡೀ ಮನೆ ದಂಗಾಗಿ ಇಬ್ಬರನ್ನೂ ನೋಡುತ್ತಾ ನಿಂತಿತು.

 
			

 
		 
		 
                                
                              
		