ಒಂದು ಮನೆಗಾಗಿ ಇಬ್ಬರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

Public TV
1 Min Read

ಶಿವಮೊಗ್ಗ: ವಾಸದ ಮನೆಯ ವಿಷಯಕ್ಕೆ ಕುಡಿದ ಮತ್ತಿನಲ್ಲಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದ (Shivamogga) ವಿದ್ಯಾನಗರದಲ್ಲಿ (Vidyanagar) ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಸುಭಾಷ್ ನಗರದ ನಿವಾಸಿ ಜ್ಞಾನೇಶ್ವರ್ (45) ಎಂದು ಗುರುತಿಸಲಾಗಿದೆ. ವಿದ್ಯಾನಗರ ಬಡಾವಣೆಯಲ್ಲಿ ಜ್ಞಾನೇಶ್ವರ್ ಅವರ ಪತ್ನಿ, ತಾಯಿಗೆ ಸೇರಿದ ಮನೆ (Home) ಇದೆ. ಈ ಮನೆಯ ವಿಚಾರಕ್ಕೆ ಜ್ಞಾನೇಶ್ವರ್ ಹಾಗೂ ಪತ್ನಿಯ ಸೋದರಮಾವ ನಾಗರಾಜನ ನಡುವೆ ಶನಿವಾರ ಜಗಳ ನಡೆದಿದೆ. ಇದನ್ನೂ ಓದಿ: ಗ್ರೆನೇಡ್ ಮೇಲಿನ ಮೇಡ್ ಇನ್ ವಿವರವನ್ನೇ ಅಳಿಸಿ ಹಾಕಿರುವ ಶಂಕಿತ ಉಗ್ರರು

ಶನಿವಾರ ರಾತ್ರಿ ಇಬ್ಬರು ಮದ್ಯ ಸೇವಿಸಿ ಜಗಳವಾಡಿಕೊಂಡಿದ್ದಾರೆ. ಈ ವೇಳೆ ನಾಗರಾಜ್, ಜ್ಞಾನೇಶ್ವರ್‌ನನ್ನು ಬಲವಾಗಿ ನೆಲಕ್ಕೆ ತಳ್ಳಿದ್ದಾನೆ. ಜ್ಞಾನೇಶ್ವರ್ ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಪೆಟ್ಟು ಬಿದ್ದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಜ್ಞಾನೇಶ್ವರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬೆಂಗ್ಳೂರಿನ 2 ಮನೆಗಳಲ್ಲಿ ಕೆಜಿಗಟ್ಟಲೆ ಸ್ಫೋಟಕ ಪತ್ತೆ

ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಳಿಕ ಆರೋಪಿ ನಾಗರಾಜ್ ನಾಪತ್ತೆಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೋಟೆ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕೆ ತರಬೇತಿ ನಡೆಸಿದ್ದ ಯುವತಿ -‌ ಕೊಲೆಗೆ 3 ದಿನಗಳ ಹಿಂದೆಯೇ ಸ್ಕೆಚ್‌ ಹಾಕಿದ್ದ ಪಾಪಿ ಪ್ರೇಮಿ!

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್