ಚರ್ಚ್‍ನ ಹುಂಡಿ ಕಾಸಿಗಾಗಿ ಎರಡು ಗುಂಪಿನ ನಡುವೆ ಮಾರಾಮಾರಿ!

Public TV
1 Min Read

ಶಿವಮೊಗ್ಗ: ಚರ್ಚ್‍ನ (Church) ಹುಂಡಿ ಕಾಸಿಗಾಗಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿರುವುದು ಹೊಳೆಹೊನ್ನೂರು (Holehonnur) ಸಮೀಪದ ಸದಾಶಿವ ನಗರದ ಹಕ್ಕಿಪಿಕ್ಕಿ ಕ್ಯಾಂಪ್ ಚರ್ಚ್‍ನಲ್ಲಿ ನಡೆದಿದೆ.

ಭಾನುವಾರದ ಪ್ರಾರ್ಥನೆ ವೇಳೆ ಭಕ್ತರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಚರ್ಚ್‍ನ ಹುಂಡಿ ಹಣದ ವಿಚಾರಕ್ಕೆ ಗಲಾಟೆ ನಡೆದಿದೆ. ಹುಂಡಿ ಹಣದ ಮೇಲೆ ಹಿಡಿತ ಸಾಧಿಸುವ ಸಂಬಂಧ ಹಳೆಯ ಮತ್ತು ಹೊಸ ಟ್ರಸ್ಟ್ ಸದಸ್ಯರ ನಡುವೆ ಭಿನ್ನಾಭಿಪ್ರಾಯದಿಂದ ಈ ಗಲಾಟೆ ನಡೆದಿದೆ.

ಹೊರಗಿನವರೇ ಇರುವ ಟ್ರಸ್ಟ್‌ನವರು ಬಂದು ಹುಂಡಿಯ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪರಸ್ಪರ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಡ ಗಾಯಗಳಾಗಿವೆ.

ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಕ್ಕಿಪಿಕ್ಕಿ ಕ್ಯಾಂಪ್‍ನಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

Share This Article