BBK 11: ನಿನ್ನದು ನರಿ ಕಣ್ಣೀರು- ಯುವರಾಣಿ ಮೋಕ್ಷಿತಾಗೆ ತಿವಿದ ಉಗ್ರಂ ಮಂಜು

Public TV
2 Min Read

ನ್ನಡದ ಬಿಗ್ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರಂಗೇರಿದೆ.  ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲ್ಲವೂ ಬದಲಾಗಿ ಹೋಗಿದೆ. 9ನೇ ವಾರದಲ್ಲಿ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಒಂದು ಕಡೆ ಮಹಾರಾಜ ಉಗ್ರಂ ಮಂಜು, ಮತ್ತೊಂದು ಕಡೆ ಯುವರಾಣಿ ಮೋಕ್ಷಿತಾ ಪೈ (Mokshitha Pai) ಮನೆಯ ಪಟ್ಟಕ್ಕಾಗಿ ಕಿರಿಕ್‌ ನಡೆದಿದೆ. ಈ ವೇಳೆ, ನಿನ್ನದು ನರಿ ಕಣ್ಣೀರು ಎಂದು ಮೋಕ್ಷಿತಾಗೆ ಮಂಜು ತಿವಿದಿದ್ದಾರೆ. ಇದನ್ನೂ ಓದಿ:‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಎಂದು ಭಾವಿ ಪತಿ ಜೊತೆ ಚಂದನಾ ಭರ್ಜರಿ ಡ್ಯಾನ್ಸ್

ಯುವರಾಣಿ ಮೋಕ್ಷಿತಾ ಅವರನ್ನು ನೋಡಿದಾಗ ಎಲ್ಲರೂ ತಲೆ ಬಾಗಿ ನಮಸ್ಕಾರ ಮಾಡಬೇಕು ಅಂತ ಗೋಲ್ಡ್ ಸುರೇಶ್ ಗೌತಮಿ, ತ್ರಿವಿಕ್ರಮ್, ಧನರಾಜ್ ಮುಂದೆ ಹೇಳುತ್ತಾ ಇರುತ್ತಾರೆ. ಆಗ ಗೌತಮಿ ಆಗೋದಿಲ್ಲ. ಯಾರು ಹತ್ತಿರ ತಲೆ ಬಗ್ಗಿಸಲಿ, ತಲೆ ಬಗ್ಗಿಸಿದ ದಿನ ನಾವು ಅವರನ್ನು ಒಪ್ಪಿಕೊಂಡಂತೆ ಲೆಕ್ಕ ಅಂತ ಹೇಳಿದ್ದಾರೆ.

ಆಗ ಮಂಜಣ್ಣ ನಾಲಿಗೆಗೆ ಮೆತ್ತಿಕೊಂಡು, ನರಿಯ ಕಣ್ಣೀರು ಹಾಕಿ ಆಡಿದ್ದು ಆಟವಲ್ಲ. ಯುವರಾಣಿ ಪಟ್ಟ ನಾನು ಕೊಟ್ಟಿರುವ ಭಿಕ್ಷೆ ಅಂತ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕೋಪಗೊಂಡ ಮೋಕ್ಷಿತಾ ನೀವು ಕೊಟ್ಟಿದ್ದಲ್ಲ ಬಿಗ್ ಬಾಸ್ (Bigg Boss) ಕೊಟ್ಟಿರೋ ಭಿಕ್ಷೆ ಅಂತ ಜೋರಾಗಿ ಕಿರುಚಾಡಿದ್ದಾರೆ. ಯಾರ ಯಾರ ಯೋಗ್ಯತೆ ಏನು ಎಂಬುದು ಗೊತ್ತಿದೆ ಎಂದು ಮಂಜು ಮೋಕ್ಷಿತಾಗೆ ಟಾಂಗ್ ಕೊಟ್ಟಿದ್ದಾರೆ.

ಅದಕ್ಕೆ ನಿಮಗೆ ಯೋಗ್ಯತೆ ಏನು ಎಂಬುದು ನನಗೂ ಗೊತ್ತಿದೆ ಎಂದು ಮೋಕ್ಷಿತಾ ತಿರುಗೇಟು ಕೊಟ್ಟಿದ್ದಾರೆ. ‘ಆಕಾಶದಲ್ಲಿ ನೀ ದೀಪವಾದೆ’ ಎಂದು ಮೋಕ್ಷಿತಾ ಹಾಡಿದ ಹಾಡನ್ನೇ ಹಾಡುತ್ತಾ ಮಂಜು (Ugramm Manju) ಕೆಣಕಿದ್ದಾರೆ. ಸಿಟ್ಟಿನಲ್ಲಿ ಥೂ ಎಂದು ಮಂಜುಗೆ ಹೇಳಿದ್ದಾರೆ. ಸ್ನೇಹಿತರಾಗಿದ್ದ ಗೌತಮಿ, ಮೋಕ್ಷಿತಾ, ಮಂಜು ನಡುವೆ ಈಗ ಬಿಗ್ ವಾರ್ ಶುರುವಾಗಿದೆ.

Share This Article