ಕೈ ಕೈ ಮಿಲಾಯಿಸಿದ ಕೈ ಕಾರ್ಯಕರ್ತರು: ಕುರ್ಚಿಗಳನ್ನು ಮುರಿದು ಆಕ್ರೋಶ-ವಿಡಿಯೋ ನೋಡಿ

Public TV
1 Min Read

ಬೆಂಗಳೂರು: ಪದ್ಮನಾಭ ನಗರದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ನಡುವೆಯೇ ಕಚ್ಚಾಟ ಏರ್ಪಟ್ಟು, ಕೈ ಕೈ ಮಿಲಾಯಿಸಿದ ಘಟನೆ ವರದಿಯಾಗಿದೆ.

ಹೌದು, ಸ್ವಪಕ್ಷೀಯ ಕಾರ್ಯಕರ್ತರು ಕೈ ಕೈ ಮಿಲಾಯಿಸಿ ಕಿತ್ತಾಡಿಕೊಂಡಿದ್ದಲ್ಲದೇ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪರ ಕೆಲ ಕಾರ್ಯಕರ್ತರು ಜೈಕಾರ ಕೂಗಿದ್ದಾರೆ.

ಪದ್ಮನಾಭ ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರಾದ ಗುರಪ್ಪ ನಾಯ್ಡು ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಂಡಿದ್ದರು. ಆದರೆ ಈ ಸಭೆಗೆ ಮಾಜಿ ಶಾಸಕ ಎಂ. ಶ್ರೀನಿವಾಸ್‍ರವರಿಗೆ ಆಹ್ವಾನ ನೀಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಅವರ ಅಭಿಮಾನಿಗಳು ಹೋಟೆಲ್‍ಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಗುರಪ್ಪ ನಾಯ್ಡು ಹಾಗೂ ಶ್ರೀನಿವಾಸ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಶ್ರೀನಿವಾಸ್ ಅವರ ಅಭಿಮಾನಿಗಳು ಸ್ಥಳದಲ್ಲಿದ್ದ ಕುರ್ಚಿಗಳನ್ನು ಮುರಿದು ಹಾಕಿದ್ದಾರೆ. ಅಲ್ಲದೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪರ ಜೈಕಾರ ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಪದ್ಮನಾಭನಗರದಿಂದ ಎಂ. ಶ್ರೀನಿವಾಸ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪರಾಜಯಗೊಂಡಿದ್ದರು. ಸಭೆಯಲ್ಲಿ ಕೈ ಕೈ ಕಾರ್ಯಕರ್ತರು ಕಿತ್ತಾಡಿಕೊಂಡಿದ್ದನ್ನು ಗಮನಿಸಿದ ನಾಯಕರು ಹಾಗೂ ಇನ್ನುಳಿದ ಕಾರ್ಯಕರ್ತರು ಸ್ಥಳದಿಂದ ಒಬ್ಬೊಬ್ಬರಾಗಿ ಹೊರನಡೆದರು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=Efstp5iqXo8

Share This Article
Leave a Comment

Leave a Reply

Your email address will not be published. Required fields are marked *