ಬಸ್ ನಿಲ್ದಾಣ ಜಾಗದ ವಿಚಾರಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ – ಚಾಕು ಇರಿತದಿಂದ ಯುವಕ ಗಂಭೀರ

Public TV
1 Min Read

ಹಾವೇರಿ: ಬಸ್ ನಿಲ್ದಾಣದ (Bus Stop) ಜಾಗದ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ (Stabbing) ಮಾಡಿದ್ದಾನೆ. ಚಾಕು ಇರಿತದಿಂದಾಗಿ ಯುವಕನೊಬ್ಬನ ಸ್ಥಿತಿ ಗಂಭೀರವಾಗಿದ್ದು, ಇನ್ನೂ 8 ಜನರಿಗೆ ಗಾಯಗಳಾಗಿವೆ. ಘಟನೆ ಹಾವೇರಿ (Haveri) ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾನಗರ ತಾಂಡದಲ್ಲಿ ನಡೆದಿದೆ.

ಚಾಕು, ಕಲ್ಲು ಹಾಗೂ ಬಡಿಗೆಯನ್ನು ಹಿಡಿದುಕೊಂಡು 2 ಗುಂಪುಗಳ ಜನರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯ ವೇಳೆ ಓರ್ವ ವ್ಯಕ್ತಿಯಿಂದ ಹಲವರಿಗೆ ಚಾಕು ಇರಿತವಾಗಿದೆ. ಕಲ್ಲಿನಿಂದ ಹೊಡೆದಾಡಿಕೊಂಡಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

ಯುವಕನೊಬ್ಬನ ಎದೆಗೆ ಚಾಕು ಇರಿಯಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಹಲ್ಲೆಯಲ್ಲಿ ಆತನ ಕೈ ಬೆರಳುಗಳು ತುಂಡಾಗಿವೆ. ತಲೆಗೆ ಗಂಭೀರವಾದ ಗಾಯಗಳಾಗಿವೆ. ಘಟನೆಯಲ್ಲಿ ಇನ್ನೂ 8 ಜನರಿಗೆ ಗಾಯಗಳಾಗಿದ್ದು, ಅವರೆಲ್ಲರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಒಂದೂವರೆ ತಿಂಗಳಲ್ಲಿ 7361 ರೌಡಿಗಳು ರೌಡಿ ಪಟ್ಟಿಯಿಂದ ಔಟ್

ಸ್ಥಳೀಯ ಸುರೇಶ್ ಲಮಾಣಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗ್ರಾಮದಲ್ಲಿ ಬಸ್ ನಿಲ್ದಾಣದ ಜಾಗದ ಬಗ್ಗೆ 2 ಗುಂಪುಗಳ ನಡುವೆ ಜಗಳವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *