ಉಗ್ರರು ಮತ್ತೆ ಹೆಡೆ ಬಿಚ್ಚಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ: ಮೋದಿ ಖಡಕ್‌ ಸಂದೇಶ

By
1 Min Read

– ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ನಿಂತಿಲ್ಲ:‌ ಪಾಕ್‌ಗೆ ಎಚ್ಚರಿಕೆ ಸಂದೇಶ

ಪಾಟ್ನಾ: ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ನಿಂತಿಲ್ಲ ಎಂದು ಪಾಕಿಸ್ತಾನಕ್ಕೆ (Pakistan) ಪ್ರಧಾನಿ ನರೇಂದ್ರ ಮೋದಿ (PM Modi) ಎಚ್ಚರಿಕೆ ನೀಡಿದ್ದಾರೆ.

ಶತ್ರುಗಳು ಆಪರೇಷನ್ ಸಿಂಧೂರ ಶಕ್ತಿಯನ್ನು ನೋಡಿದ್ದಾರೆ. ‘ಆಪರೇಷನ್‌ ಸಿಂಧೂರ’ ಭಾರತದ ಬತ್ತಳಿಕೆಯಿಂದ ಬಿಟ್ಟ ಕೇವಲ ಒಂದು ಬಾಣ ಅಷ್ಟೇ. ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ

ಭಯೋತ್ಪಾದನೆ ಮತ್ತೆ ತನ್ನ ಹೆಡೆಯನ್ನು ಎತ್ತಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ ಎಂದು ಹಾವಿಗೆ ಹೋಲಿಸಿ ಪ್ರಧಾನಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕರಕಟ್‌ನಲ್ಲಿ ಸುಮಾರು 50,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ರ‍್ಯಾಲಿಯನ್ನು ಉದ್ದೇಶಿಸಿ ಮೋದಿ ಈ ಮಾತುಗಳನ್ನಾಡಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಯ ಒಂದು ದಿನದ ನಂತರ ನಾನು ಬಿಹಾರಕ್ಕೆ ಬಂದಿದ್ದೆ. ಅಲ್ಲಿ ನಮ್ಮ ಅನೇಕ ಸಹೋದರಿಯರು ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದರು. ಅಪರಾಧಿಗಳಿಗೆ ಅವರು ಕನಸಿನಲ್ಲಿಯೂ ಊಹಿಸಲಾಗದ ಶಿಕ್ಷೆಯನ್ನು ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೆ. ಇಂದು, ಭರವಸೆಯನ್ನು ಈಡೇರಿಸಿದ ನಂತರ ನಾನು ಬಿಹಾರಕ್ಕೆ ಮತ್ತೆ ಬಂದಿದ್ದೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಬೆದರಿಕೆಗೆ ಹೆದರಲ್ಲ, ಕ್ಷಮೆ ಕೇಳಲ್ಲ- ಕಮಲ್ ಹಾಸನ್ ಉದ್ಧಟತನ

ಪಾಕಿಸ್ತಾನ ಮತ್ತು ಜಗತ್ತು ಭಾರತದ ಹೆಣ್ಣುಮಕ್ಕಳ ‘ಸಿಂಧೂರ’ (ಆಪರೇಷನ್‌ ಸಿಂಧೂರ) ಶಕ್ತಿಯನ್ನು ನೋಡಿದೆ. ಪಾಕಿಸ್ತಾನ ಸೇನೆಯ ರಕ್ಷಣೆಯಲ್ಲಿ ಭಯೋತ್ಪಾದಕರು ಸುರಕ್ಷಿತ ಭಾವನೆ ಹೊಂದಿದ್ದರು. ಆದರೆ ಭಾರತೀಯ ಪಡೆಗಳು ಅವರನ್ನು ಬಲಿಹಾಕಿದ್ದಾರೆ ಎಂದು ಹೇಳಿದ್ದಾರೆ.

ನಾವು ಪಾಕಿಸ್ತಾನದ ವಾಯುನೆಲೆಗಳು ಮತ್ತು ಅದರ ಮಿಲಿಟರಿ ಸ್ಥಾಪನೆಗಳನ್ನು ಸಹ ನಾಶಪಡಿಸಿದ್ದೇವೆ. ಇದು ನವ ಭಾರತ ಮತ್ತು ಅದರ ಶಕ್ತಿ ಎಲ್ಲರೂ ನೋಡುವುದಕ್ಕಾಗಿ ಎಂದಿದ್ದಾರೆ.

Share This Article